ಕಾರ್ಕಳ : ಬಜಗೋಳಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಪ್ರಥಮ ವರ್ಷದ ಶ್ರೀ ಶಾರದಾ ಮಹೋತ್ಸವ ಅ. 23 ರಂದು ಬಜಗೋಳಿ ಪಂಚಾಯತ್ ಮೈದಾನದಲ್ಲಿ ನಡೆಯಲಿದೆ. ವೇದಮೂರ್ತಿ ಎಂ. ರಾಮ ಭಟ್ ಮುಡ್ರಾಲು ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ.
ಬೆಳಿಗ್ಗೆ 11 ರಿಂದ 12-30 ರವರೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಬಜಗೋಳಿ ಕಿ. ಪ್ರಾ. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 4 ರಿಂದ 6 ಗಂಟೆಯವರೆಗೆ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ, ಸಂಜೆ 6 ರಿಂದ 7 ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7 ರಿಂದ ಮಹಾಪೂಜೆ ಬಳಿಕ ರಂಗಪೂಜೆ ನಡೆಯಲಿದೆ. ರಾತ್ರಿ 8 ಗಂಟೆಗೆ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಹುಲಿ ಕುಣಿತ, ಕೇರಳದ ವಿಶೇಷ ಟ್ಯಾಬ್ಲೋ, ಹಲವು ತಂಡಗಳಿಂದ ಕುಣಿತ ಭಜನೆ, ಕೀಲು ಕುದುರೆ ಹಾಘೂ ಟ್ಯಾಬ್ಲೋಗಳು ಇರಲಿದೆ.
ಮುದ್ದು ಶಾರದ ಸ್ಪರ್ಧೆ
ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೆ 2 -5 ಮತ್ತು 6-10 ವಯೋಮಿತಿಯ ಮಕ್ಕಳಿಗೆ ಮುದ್ದು ಶಾರದ ಸ್ಪರ್ಧೆ ನಡೆಯಲಿದೆ.
ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧಿಗಳ ಹೆಸರನ್ನು 20-10-2023 ರೊಳಗೆ ನೋಂದಾಯಿಸಿಕೊಳ್ಳಬೇಕು.
22-10-2023 ರಂದು ಸ್ಪರ್ಧಿಗಳಿಗೆ ಸ್ಲೋಟ್ ನಂಬರ್ ತಿಳಿಸಲಾಗುವುದು.
ಸ್ಪರ್ಧಿಗೆ 3 ರಿಂದ 5 ನಿಮಿಷಗಳ ಕಾಲಾವಕಾಶವಿರುತ್ತದೆ.
ಮಕ್ಕಳ ಅಲಂಕಾರದ ಜವಾಬ್ದಾರಿ ಪೋಷಕರದ್ದಾಗಿರುತ್ತದೆ.
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಪ್ರಥಮ, ದ್ವಿತೀಯ, ತೃತೀಯ ಸ್ಥಾನ ವಿಜೇತರಿಗೆ ಹಾಗೂ ಜನಮೆಚ್ಚುಗೆ ಪಡೆದ ಶಾರದೆಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಸ್ಪರ್ಧಿಗಳು ಕಾರ್ಯಕ್ರಮಕ್ಕೆ ಮುಂಚಿತವಾಗಿ ಹಾಜರಿರಬೇಕು.
ಪ್ರಮಾಣಿಕೃತ ಐಡಿ ಕಾರ್ಡ್ ತರಬೇಕು
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 9535587950 (ನಿಖಿತಾ ವಿಷ್ಣು ಶೆಟ್ಟಿ) ಅಥವಾ 8296141474 (ತಾರಾ ಜೀವನ್ ಮಾಳ) ದೂರವಾಣಿ ಸಂಖ್ಯೆಗೆ ಕರೆಮಾಡಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.































































