ಇಂದಿನಿಂದ ಆಸ್ತಿ ನೋಂದಣಿಗೆ ಪರಿಷ್ಕೃತ ಮಾರ್ಗಸೂಚಿ ದರ – ಆಸ್ತಿ ಮೌಲ್ಯ ಶೇ. 30ರಷ್ಟು ಹೆಚ್ಚಳ

ಕಾರ್ಕಳ : ರಾಜ್ಯಾದ್ಯಂತ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಅ. 3 ರಿಂದ ನೋಂದಣಿಯಾಗುವ ಆಸ್ತಿಗಳಿಗೆ ಪರಿಷ್ಕೃತ ಮಾರ್ಗಸೂಚಿ ದರ (ಗೈಡನ್ ವ್ಯಾಲ್ಯೂ) ಅನ್ವಯ ಆಗಲಿದೆ. ಹೀಗಾಗಿ ಶೇ. 20ರಿಂದ 30 ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಹೊರೆ ಹೆಚ್ಚಾಗಲಿದೆ.

ರಾಜ್ಯದಲ್ಲಿ ನಿವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಳೆ ಮಾರ್ಗಸೂಚಿ ದರದ ಅನ್ವಯ ಆಸ್ತಿ ನೋಂದಣಿಯನ್ನು ಸೆ. 29 ಕ್ಕೆ ಸ್ಥಗಿತಗೊಳಿಸಲಾಗಿದೆ. ಬಳಿಕ ಸೆ. 30ರಂದು ಶನಿವಾರ, ಅ. 1ರಂದು ಭಾನುವಾರ, ಅ. 2ರಂದು ಗಾಂಧಿಜಯಂತಿ ಪ್ರಯುಕ್ತ ಸತತ ರಜೆ ಇತ್ತು. ಹೀಗಾಗಿ ಹೊಸ ಮಾರ್ಗಸೂಚಿ ದರದ ಅನ್ವಯ ಅ.3ರಿಂದ ಆಸ್ತಿ ನೋಂದಣಿ ಶುರುವಾಗಲಿದೆ.

ಈ ಹಿಂದೆ 2018ರಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆಯಾಗಿತ್ತು ಕಳೆದ ನಾಲ್ಕೂವರೆ ವರ್ಷಗಳಿಂದ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಮಾರ್ಗಸೂಚಿ ದರ ಏರಿಕೆ ಆಗಿರುವುದು ಆಸ್ತಿ ಖರೀದಿದಾರರಿಗೆ ಭಾರ ಎನ್ನಿಸಿದರೆ, ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರದಿಂದ ತತ್ತರಿಸುತ್ತಿರುವ ರಾಜ್ಯ ಸರಕಾರಕ್ಕೆ ಆದಾಯದ ಆಶಾಕಿರಣವಾಗಿದೆ.









































































error: Content is protected !!
Scroll to Top