ಮುಂದಿನ ಬಾರಿಯೂ ಬಿಜೆಪಿಗೆ ಅಧಿಕಾರ : ಸಮೀಕ್ಷೆ ವರದಿ

ಮೋದಿಯೇ ಪ್ರಧಾನಿಯಾಗಬೇಕು ಎನ್ನುತ್ತಿದ್ದಾರೆ ಜನ

ಹೊಸದಿಲ್ಲಿ : ಮುಂದಿನ ವರ್ಷ ಎಪ್ರಿಲ್‌-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ತಯಾರಿ ಪ್ರಾರಂಭಿಸಿವೆ. ಹಳೆ ಮೈತ್ರಿ ಮುರಿದುಕೊಳ್ಳುವುದು, ಹೊಸ ಮೈತ್ರಿ ಮಾಡಿಕೊಳ್ಳುವುದೆಲ್ಲ ನಡೆದಿದೆ. ಪ್ರಮುಖವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು 26 ಪಕ್ಷಗಳು ಸೇರಿಕೊಂಡು ರಚಿಸಿರುವ ಇಂಡಿಯ ಮೈತ್ರಿಕೂಟಗಳ ನಡುವೆ ಬಿರುಸಿನ ಸೆಣಸಾಟ ನಡೆಯುವ ವಾತಾವರಣ ಮೂಡಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದು ಮಾತ್ರ ಅಚ್ಚರಿಯ ಫಲಿತಾಂಶವನ್ನು ನೀಡಿದೆ.
ಎನ್‌ಡಿಎ ಮೈತ್ರಿಕೂಟ ಮುಂದಿನ ಚುನಾವಣೆಯಲ್ಲೂ ಗೆದ್ದು ಹ್ಯಾಟ್ರಿಕ್‌ ಗೆಲುವು ದಾಖಲಿಸಿದೆ ಎನ್ನುತ್ತಿದೆ ಈ ಸಮೀಕ್ಷೆ. ದೇಶದ ಪ್ರಮುಖ ಆಂಗ್ಲ ಭಾಷಾ ಸುದ್ದಿವಾಹಿನಿ ‘ಟೈಮ್ಸ್ ನೌ’ ಈ ಸಮೀಕ್ಷೆ ಮೂಲಕ ದೇಶದ ಜನರ ಭಾವನೆಯನ್ನು ಅರಿಯಲು ಪ್ರಯತ್ನಿಸಿದೆ. ಇದರಲ್ಲಿ ಎನ್‌ಡಿಎಗೆ ಮತ್ತೊಮ್ಮೆ ನಿಚ್ಚಳ ಬಹುಮತ ಸಿಗುವುದು ಖಾತರಿ ಎಂದು ವ್ಯಕ್ತವಾಗಿದೆ. ಮಾತ್ರವಲ್ಲ ಬಹತೇಕ ಜನರು ನರೇಂದ್ರ ಮೋದಿ ನಾಯಕತ್ವದಲ್ಲಿ ವಿಶ್ವಾಸ ಹೊಂದಿದ್ದು, ಅವರನ್ನೇ ಮೂರನೇ ಬಾರಿಗೆ ಪ್ರಧಾನಿಯಾಗಿ ನೋಡಲು ಇಷ್ಟಪಟ್ಟಿದ್ದಾರೆ.
543 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 297ರಿಂದ 317 ಸ್ಥಾನ ಪಡೆದು ಸರ್ಕಾರ ರಚಿಸಲಿದೆ ಎನ್ನುತ್ತಿದೆ ಈ ಸಮೀಕ್ಷೆ. ‘ಇಂಡಿಯ’ ಒಕ್ಕೂಟ 165ರಿಂದ 185 ಸ್ಥಾನ ಪಡೆಯಬಹುದು ಎನ್ನುತ್ತಿದೆ.













































































error: Content is protected !!
Scroll to Top