ಇಂದು ಬೀದರ್‌ಗೆ ಪ್ರಧಾನಿ ಮೋದಿ ಆಗಮನ

ತೆಲಂಗಾಣದಲ್ಲಿ ಕಾರ್ಯಕ್ರಮ ನಿಗದಿ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಧಾನಿ ಮೋದಿ ಬೀದರ್‌ನ ಏರ್‌ಬೇಸ್‌ಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಮೂರು ಕಿಲೋಮೀಟರ್ ವ್ಯಾಪ್ತಿಯಲಿ ಡ್ರೋನ್ ಹಾರಾಟ ಬಂದ್ ಮಾಡಲಾಗಿದೆ.
ಛತ್ತೀಸ್‌ಗಢದಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 2 ಗಂಟೆಗೆ ಮೋದಿ ಬೀದರ್‌ಗೆ ಆಗಮಿಸಲಿದ್ದಾರೆ.
ಬೀದರ್ ಏರ್‌ಬೇಸ್‌ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ತೆಲಂಗಾಣದ ನಿಜಾಮಾಬಾದ್‌ಗೆ ತೆರಳಲಿದ್ದಾರೆ. ವಿಮಾನ ಏರುವ ಮೊದಲು ನರೇಂದ್ರ ಮೋದಿ ವಾಯುನೆಲೆಯಲ್ಲಿ ಸ್ಥಳೀಯರೊಂದಿಗೆ ಕೆಲವು ನಿಮಿಷ ಮಾತುಕತೆ ನಡೆಸಲಿದ್ದಾರೆ. ನರೇಂದ್ರ ಮೋದಿ ತೆಲಂಗಾಣಕ್ಕೆ ಭೇಟಿ ನೀಡಲು ಬೀದರ್‌ನ ವಾಯುನೆಲೆಗೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಅವರ ಯಾವುದೇ ಕಾರ್ಯಕ್ರಮಗಳು ನಿಗದಿಯಾಗಿಲ್ಲ. ತೆಲಂಗಾಣ ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪದೇಪದೆ ಆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಕ್ಟೋಬರ್ 1ರಂದು ತೆಲಂಗಾಣಕ್ಕೆ ಭೇಟಿ ನೀಡಿದ್ದರು.
ಸಂಜೆ ವೇಳೆಗೆ ನಿಜಾಮಾಬಾದ್‌ನಿಂದ ಬೀದರ್ ಏರ್‌ಬೇಸ್‌ಗೆ ವಾಪಾಸಾಗಲಿದ್ದು, ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.













































































error: Content is protected !!
Scroll to Top