ಕೊಲ್ಲೂರು : ವ್ಯಕ್ತಿಯೊಬ್ಬ ತನ್ನ ಜಮೀನಿಗೆ ನುಗ್ಗಿದ ದನವನ್ನು ಗುಂಡಿಕ್ಕಿ ಸಾಯಿಸಿದ ಅಮಾನವೀಯ ಘಟನೆ ಕೊಲ್ಲೂರು ಸಮೀಪ ಸಂಭವಿಸಿದೆ. ಕೆಲ ದಿನಗಳ ಹಿಂದೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಅಂಗಡಿಜೆಡ್ಡು ಎಂಬಲ್ಲಿ ನರಸಿಂಹ ಎಂಬಾತನ ಗದ್ದೆಗೆ ಪಕ್ಕದ ಮನೆಯ ಗುಲಾಬಿ ಎಂಬವರ ದನ ಹೋಗಿತ್ತು. ನರಸಿಂಹ ಈ ದನವನ್ನು ಗುಂಡಿಕ್ಕಿ ಸಾಯಿಸಿದ್ದ. ಗುಲಾಬಿ ಮತ್ತು ಮನೆಯವರು ಈ ಬಗ್ಗೆ ವಿಚಾರಿಸಲು ಹೋದಾಗ ನರಸಿಂಹ ಅವರಿಗೂ ಕೋವಿ ತೋರಿಸಿ ಬೆದರಿಸಿ ಈ ರೀತಿ ನಾನು 20ಕ್ಕೂ ಹೆಚ್ಚು ದನಗಳಿಗೆ ಗುಂಡಿಕ್ಕಿದ್ದೇನೆ, ಅದೇ ರೀತಿ ನಿಮಗೂ ಗುಂಡು ಹಾರಿಸುತ್ತೇನೆ ಎಂದಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಪರಿಸರದಲ್ಲಿ ನಾಲ್ಕು ದನಗಳು ಗುಂಡೇಟಿನಿಂದ ಸತ್ತಿರುವುದಕ್ಕೆ ಮತ್ತು 14 ದನಗಳು ಗಾಯಗೊಂಡಿರುವುದಕ್ಕೆ ನರಸಿಂಹನೇ ಕಾರಣ ಎಂದು ಇದರಿಂದ ತಿಳಿದು ಬಂದಿದೆ. ಗುಲಾಬಿಯವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡಿಟ್ಟು ದನಗಳ ಹತ್ಯೆ : ದೂರು ದಾಖಲು
























