ವಿದ್ಯುತ್‌ ಶಾಕ್‌ನಿಂದ ಗಂಡ-ಹೆಂಡತಿ ಸಾವು

ದಾರಿಯಲ್ಲಿ ತುಂಡಾಗಿ ಬಿದ್ದ ತಂತಿ ಸ್ಪರ್ಶಿಸಿ ಸಂಭವಿಸಿದ ದುರಂತ

ಬೈಂದೂರು: ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಗಂಡ ಮತ್ತು ಹೆಂಡತಿ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಬೈಂದೂರಿನಲ್ಲಿ ಸಂಭವಿಸಿದೆ.
ಮಹಾಬಲ ದೇವಾಡಿಗ (58) ಮತ್ತು ಲಕ್ಷ್ಮಿ ಮಹಾಬಲ ದೇವಾಡಿಗ (48) ಮೃತರು. ಹೆಮ್ಮಾಡಿ ಗ್ರಾಮದ ಸುಳ್ಸೆ ಭಟ್ರು ಮನೆ ತೋಟದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಧ್ಯಾಹ್ನದ ವೇಳೆ ಮನೆ ಕೆಲಸಕ್ಕೆ ಹೋಗುವಾಗ ಪತಿಗೆ ವಿದ್ಯುತ್ ಶಾಕ್ ತಗುಲಿದ್ದು ಅವರನ್ನು ಪತ್ನಿ ರಕ್ಷಿಸಲು ಹೋಗಿ ಇಬ್ಬರೂ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ್ ಡಿ. ಗೌಡ, ಕಂದಾಯ ಆರ್.ಐ . ರಾಘವೇಂದ್ರ ದೇವಾಡಿಗ, ಮೆಸ್ಕಾಂ ಸಿಬ್ಬಂದಿ ಬಂದು ಪರಿಶೀಲನೆ ಮಾಡಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































error: Content is protected !!
Scroll to Top