ಲಾರಿ-ಟೆಂಪೊ ಮಾಲಕರ ಕರೆ
ಉಡುಪಿ : ಮರಳು, ಕೆಂಪುಕಲ್ಲು, ಜಲ್ಲಿಕಲ್ಲು ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳನ್ನು ಹಿಡಿದು ಪೊಲೀಸರು ಕೇಸು ಹಾಕುತ್ತಿರುವುದನ್ನು ಪ್ರತಿಭಟಿಸುತ್ತಿರುವ ಲಾರಿ ಮತ್ತು ಟೆಂಪೊ ಮಾಲಕ-ಚಾಲಕರು ಅಕ್ಟೋಬರ್ 3ರಂದು ಉಡುಪಿ ಜಿಲ್ಲೆ ಬಂದ್ ನಡೆಸಲು ಕರೆನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಪೊಲೀಸರ ನಿರಂಕುಶ ಕ್ರಮವನ್ನು ವಿರೋಧಿಸಿ ಲಾರಿ ಮತ್ತು ಟೆಂಪೊ ಮಾಲಕರು ವಾಹನಗಳನ್ನು ರಸ್ತೆಗಿಳಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲೂಕು ಕಚೇರಿಗಳ ಮುಂದೆ ವಾಹನಗಳನ್ನು ತಂದು ಸಾಲಾಗಿ ನಿಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮತ್ತು ಎಸ್‌ಪಿ ಡಾ.ಅರುಣ್ ಜತೆ ಉಡುಪಿ ಜಿಲ್ಲೆಯ ಐವರು ಶಾಸಕರ ಉಪಸ್ಥಿತಿಯಲ್ಲಿ ಲಾರಿ ಮತ್ತು ಟೆಂಪೊ ಮಾಲಕರ ಸಂಘದವರು ಮಾತುಕತೆ ನಡೆಸಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಅ.3ರಂದು ಜಿಲ್ಲಾ ಬಂದ್ ನಡೆಸಲು ಲಾರಿ-ಟೆಂಪೊ ಮಾಲಕರ ಸಂಘದ ಒಕ್ಕೂಟದ 12 ವಲಯಗಳ ಪ್ರಮುಖರು ಸಭೆ ನಡೆಸಿ ಬಂದ್ ನಡೆಸಲು ತೀರ್ಮಾನಿಸಿದ್ದಾರೆ.























