ಕಜ್ಕೆ : ಶ್ರೀ ಶಿವಸುಜ್ಜಾನತೀರ್ಥ ಮಹಾಸ್ವಾಮೀಜಿ ಕೊಕ್ಕರ್ಣೆಯ ಸೀತಾನದಿಯಲ್ಲಿ ಸಿಮೋಲ್ಲಂಘನ

ಹೆಬ್ರಿ : ಕಜ್ಕೆಯಲ್ಲಿರುವ ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶಾಖಾ ಮಠದಲ್ಲಿ ತನ್ನ 41ನೇ ಚಾತುರ್ಮಾಸ್ಯ ವೃತಾನುಷ್ಠಾನ ಪೂರೈಸಿದ ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಜಾನತೀರ್ಥ ಮಹಾಸ್ವಾಮೀಜಿ ಸೆ. 29 ರಂದು ಕೊಕ್ಕರ್ಣೆಯ ಪವಿತ್ರ ಸೀತಾನದಿಯಲ್ಲಿ ಸಿಮೋಲ್ಲಂಘನ ನಡೆಸಿದರು.

ವೇದಮೂರ್ತಿ ಚಂದ್ರಕಾಂತ್‌ ಪುರೋಹಿತ್‌ ನೇತ್ರತ್ವದಲ್ಲಿ ರವೀಂದ್ರ ಪುರೋಹಿತ್‌, ದಿವಾಕರ ಪುರೋಹಿತ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಕಾಡೂರಿನಿಂದ ಗಣೇಶ ಕಲಾ ಮಂದಿರಕ್ಕೆ ಗುರುಗಳ ಪುರಮೆರವಣಿಗೆ ನಡೆದು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಸೀಮೋಲ್ಲಂಘನ ಮುಗಿಸಿದ ಶ್ರೀ ಶಿವಸುಜ್ಜಾನತೀರ್ಥ ಮಹಾಸ್ವಾಮೀಜಿ ರಾತ್ರಿಯೇ ಮೂಲಮಠ ಅರೆಮಾದನಹಳ್ಳಿಗೆ ಮರಳಿದರು.

41ನೇ ಚಾತುರ್ಮಾಸ್ಯ ವೃತಾನುಷ್ಠಾನದ ಸಮಿತಿಯ ಅಧ್ಯಕ್ಷ ಕಲ್ಗೋಳಿ ವಿಶ್ವನಾಥ ಆಚಾರ್ಯ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಶುಭಾಶೀರ್ವಚನ ನೀಡಿದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಜಾನತೀರ್ಥ ಮಹಾಸ್ವಾಮೀಜಿ ಮಾತೆ ಅನ್ನಪೂರ್ಣೇಶ್ವರಿಯ ದಯೆಯಿಂದ ನಮ್ಮೆಲ್ಲ ಸಂಕಲ್ಪಗಳು ಪೂರ್ಣಗೊಳ್ಳುತ್ತದೆ, ಕಜ್ಕೆಯ ಚಾತುರ್ಮಾಸ್ಯ, ಸೀತಾನದಿಯ ಸಿಮೋಲ್ಲಂಘನ ಸಹಿತ ಎಲ್ಲವೂ ಅತ್ಯಂತ ಖುಷಿ ನೀಡಿದೆ. ಮನುಷ್ಯ ಧಾರ್ಮಿಕ ತಳಹದಿಯ ಮೇಲೆ ಸುಭದ್ರವಾಗಿ ನಿಂತು ಆ ಮೂಲಕ ಜೀವನದ ಮೌಲ್ಯಗಳನ್ನು ಎಂದರು.

ಕೊಕ್ಕರ್ಣೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸಂಜೀವ ಪೂಜಾರಿ, ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ ಪೂಜಾರಿ, ಕೊಕ್ಕರ್ಣೆ ಶರನ್ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಹರೀಶ ಶಾನುಭೋಗ್‌, ಕಲ್ಮನೆ ಬ್ರಾಹ್ಮರಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ರಾಮ ನಾಯ್ಕ್‌, ಮೊಗವೀರಪೇಟೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಆನಂದ ಮರಕಾಲ, ಉದ್ಯಮಿ ಕಾಶೀನಾಥ ಶೆಣೈ, ಕಜ್ಕೆ ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ, ಕೊಕ್ಕರ್ಣೆಯ ನಾಗರಾಜ ಆಚಾರ್ಯ, ಸ್ಥಳದಾನಿಗಳಾದ ಕೃಷ್ಣಯ್ಯ ಶೆಟ್ಟಿ ಕಜ್ಕೆ, ಶ್ರೀಧರ ಕಾಮತ್‌ ಕಜ್ಕೆ, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಗಣ್ಯರು, ಮುಖಂಡರು ಉಪಸ್ಥಿತರಿದ್ದರು. ರಾಜೇಶ ಆಚಾರ್ಯ ಪೆರ್ಡೂರು ಸ್ವಾಗತಿಸಿ, ಚಂದ್ರಶೇಖರ ಆಚಾರ್ಯ ನಿರೂಪಿಸಿದರು. ಪ್ರಕಾಶ ಆಚಾರ್ಯ ಕುಕ್ಕೆಹಳ್ಳಿ ವಂದಿಸಿದರು.

















































error: Content is protected !!
Scroll to Top