ಕರಕರಿ ಫ್ರೆಂಡ್ಸ್ ಸೇವಾ ಬಳಗಕ್ಕೆ ಶಾಸಕ ಸುನಿಲ್‌ ಕುಮಾರ್‌ ಅವರಿಂದ ಸಹಾಯಧನ ಹಸ್ತಾಂತರ

ಕಾರ್ಕಳ : ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯಧನ ಹಸ್ತಾಂತರ ಹಾಗೂ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವ ಬೈಲೂರಿನ ಕರಕರಿ ಫ್ರೆಂಡ್ಸ್ ಸೇವಾ ಬಳಗದ ವತಿಯಿಂದ ನಡೆಯುತ್ತಿರುವ ಅಂಬುಲೆನ್ಸ್ ಸೇವಾ ಯೋಜನೆಗೆ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ತಮ್ಮ ವಿಕಾಸ ಸೇವಾ ಸಂಸ್ಥೆಯ ಮೂಲಕ 50 ಸಾವಿರ ರೂಪಾಯಿ ಚೆಕ್‌ನ್ನು ಸೆ. 30 ರಂದು ಹಸ್ತಾಂತರಿಸಿದರು.

ಕರಕರಿ ಫ್ರೆಂಡ್ಸ್‌ ಬಳಗದ ಅಧ್ಯಕ್ಷ ಸದಾನಂದ್ ಸಾಲಿಯಾನ್ ಜಾರ್ಕಳ, ಉಪಾಧ್ಯಕ್ಷೆ ಚಂದ್ರಿಕಾ ರಾವ್ ಬೈಲೂರು, ಶ್ರೀನಿವಾಸ್ ಪೂಜಾರಿ ಎರ್ಲಪಾಡಿ, ಶಶಿಕಾಂತ್ ಪೂಜಾರಿ ಹೆರ್ಮುಂಡೆ, ಸಂತೋಷ್ ಪೂಜಾರಿ ಅಜೆಕಾರು, ಸಚಿನ್ ಪೂಜಾರಿ ಗುಂಡುಪಾದೆ ಕಣಜಾರು, ಹರಿಪ್ರಸಾದ್ ಪೂಜಾರಿ ಪಳ್ಳಿ, ಅಜಿತಾ ಕೌಡೂರು ಮಾಣಿಕುಮೇರಿ, ರಾಜೇಶ್ವರಿ ನವೀನ್, ಪರಿಮಳ ಹರಿಪ್ರಸಾದ್ ಪಳ್ಳಿ ಉಪಸ್ಥಿತಿರಿದ್ದರು.

















































error: Content is protected !!
Scroll to Top