ಹೆಬ್ರಿ : ಅಕ್ರಮವಾಗಿ ಮರಳು ಸಂಗ್ರಹ ಮಾಡಿರುವ ಬಗ್ಗೆ ವೃಷಭ ಎಂಬವವರ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸೆ. 28 ರಂದು ವರಂಗ ಗ್ರಾಮದ ಮಾತಿಬೆಟ್ಟು ಹೊಳೆಯ ಸೇತುವೆಯ ಕೆಳಗೆ ಹೊಳೆಯಲ್ಲಿ ಮರಳನ್ನು ತೆಗೆಯಲು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಹೊಂದದೇ ಅಕ್ರಮವಾಗಿ ಸರಕಾರದ ಸೊತ್ತನ್ನು ಲಾಭದ ಉದ್ದೇಶದಿಂದ ಕಳವು ಮಾಡಿ ½ ಯುನಿಟ್ ನಷ್ಟು ಮರಳನ್ನು ಸಂಗ್ರಹಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಹೆಬ್ರಿ : ಮರಳು ಅಕ್ರಮ ಸಂಗ್ರಹ – ದೂರು ದಾಖಲು
