ಕಾರ್ಕಳ : ಕಸಬಾದ ಚೋಲ್ಪಾಡಿ ನಿವಾಸಿ ಹರೀಶ್ ರಾಘವ ಹೆಗ್ಡೆ (66) ಎಂಬವರು ಆನ್‌ಲೈನ್ ವಂಚನೆಗೆ ಗುರಿಯಾಗಿ 38 ಸಾವಿರ ರೂ. ಕಳೆದುಕೊಂಡಿದ್ದಾರೆ. ತಮ್ಮ ಗೂಗಲ್ ಪೇ ಆಪ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅವರು ಸೆ. 4ರಂದು ಇಂಟರ್‌ನೆಟ್ ಮೂಲಕ ಹುಡುಕಿ ಗೂಗಲ್ ಪೇ ಗೆ ದೂರು ಸಲ್ಲಿದ್ದರು. ಅಂದೇ ರಾತ್ರಿ ಓರ್ವ ವ್ಯಕ್ತಿ 9330944212 ಮತ್ತು 9064210959 ಎಂಬ ಎರಡು ನಂಬರ್‌ಗಳಿಂದ ಅವರಿಗೆ ಕರೆಮಾಡಿ ಗೂಗಲ್ ಪೇಯಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾನೆ. ಗೂಗಲ್ ಪೇ ಸಮಸ್ಯೆಯ ಬಗ್ಗೆ ವಿಚಾರಿಸಿ, ಬ್ಯಾಂಕ್ ಖಾತೆಯ ವಿವರ ಪಡೆದುಕೊಂಡು ಒಟಿಪಿ ಕೇಳಿ ಪಡೆದುಕೊಂಡು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 38 ಸಾವಿರ ರೂ. ಲಪಟಾಯಿಸಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ : ಗೂಗಲ್ ಪೇ ಸರಿ ಮಾಡುವ ನೆಪದಲ್ಲಿ 38 ಸಾವಿರ ರೂ. ವಂಚನೆ


































