ಬೈಕಿಗೆ ಸ್ಕೂಟಿ ಡಿಕ್ಕಿ : ಸವಾರನಿಗೆ ಗಾಯ

ಕಾರ್ಕಳ: ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ಬಳಿ ರಾಜ್ಯ ಹೆದ್ದಾರಿ 1ರಲ್ಲಿ ಬುಧವಾರ ಬೈಕಿಗೆ ಸ್ಕೂಟಿ ಡಿಕ್ಕಿ ಹೊಡೆದು, ಬೈಕ್‌ ಸವಾರ ರಾಮ ಶೆಟ್ಟಿ (61) ಎಂಬವರು ಗಾಯಗೊಂಡಿದ್ದಾರೆ. ನಿಟ್ಟೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ರಾಮ ಶೆಟ್ಟಿಯವರ ಬೈಕಿಗೆ ಕಾರ್ಕಳ ಕಡೆಗೆ ಅತಿ ವೇಗದಿಂದ ಹೋಗುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ರಾಮ ಶೆಟ್ಟಿಯವರ ಕಾಲಿಗೆ ಗಾಯವಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







































































error: Content is protected !!
Scroll to Top