ಸಮಗ್ರ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕ್ರೈಸ್ಟ್‌ಕಿಂಗ್
ಕಾರ್ಕಳ : ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ನಡೆದ ಅಂತರ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ಸೋಷಿಯಸ್-2023ರಲ್ಲಿ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ವಿದ್ಯಾರ್ಥಿಗಳಾದ ಜೋಸಿಯಾ ಫೇಸ್ ಪೈಂಟಿಂಗ್‌ನಲ್ಲಿ -ಪ್ರಥಮ, ಪ್ರೇರಣಾ ಜಿ. ರಾವ್ ಚರ್ಚಾ ಸ್ಪರ್ಧೆಯಲ್ಲಿ -ಪ್ರಥಮ, ಪೃಥ್ವಿ ಶೆಟ್ಟಿ ಸ್ಲ್ಯಾಮ್ ಪೋಯೆಟ್ರಿಯಲ್ಲಿ – ದ್ವಿತೀಯ, ಥೀಮ್ ಡ್ಯಾನ್ಸ್‌ನಲ್ಲಿ ಶ್ರೇಯಾ, ಶ್ರೇಯಾ ಎಸ್., ಶ್ರಾವ್ಯ, ಸೃಷ್ಟಿ, ವಿಜೇತಾ, ತ್ರಿಶಾ, ಸುಶಾ, ಪ್ರಿನ್ಸಿಯಾ, ಸೋನಿ ಅವರ ತಂಡ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಸಂಸ್ಥೆ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತು.








































