ನಿಟ್ಟೆ: ಕಲಿಕಾ ಮನೋಭಾವ, ಹೊಸ ಚಿಂತನಾ ಕ್ರಮ, ನಿರಂತರ ಅಧ್ಯಯನ ಮತ್ತು ಶಿಸ್ತಿನಿಂದ ಕಾರ್ಪೋರೇಟ್ ಜಗತ್ತಿನಲ್ಲಿ ಯಶಸ್ಸು ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕಾ ಅವಧಿಯಲ್ಲೇ ಸನ್ನದ್ಧರಾಗಬೇಕು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ ಮುಗೇರಾಯ ಅಭಿಪ್ರಾಯಪಟ್ಟರು. ಅವರು ಸಂಸ್ಥೆಯ 26ನೇ ಎಂಬಿಎ ಬ್ಯಾಚ್ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ 1999 -2001ನೇ ಬ್ಯಾಚ್ನ ಎಂಬಿಎ ವಿದ್ಯಾರ್ಥಿ, ಟರ್ಟಲ್ ವ್ಯಾಕ್ಸ್ ಇಂಡಿಯಾ ಲಿಮಿಟೆಡ್ನ ಸಿಇಒ ಸಾಜನ್ ಮುರಳಿ ಮಾತನಾಡುತ್ತಾ ಕಾರ್ಪೋರೇಟ್ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದಾಗ ಯಶಸ್ಸು ಖಚಿತ ಎಂದರು.
ಸಂಸ್ಥೆಯ ನಿರ್ದೇಶಕ ಡಾ. ಗುರುರಾಜ್ ಹೆಚ್. ಕಿದಿಯೂರ್ ಸಂಧರ್ಬೋಚಿತವಾಗಿ ಮಾತನಾಡಿದರು. ನಿಧಿ ಪ್ರಾರ್ಥಿಸಿದರು. ಪ್ರೊ. ಸರವಣನ್ ಸ್ವಾಗತಿಸಿ, ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ಸಂಧ್ಯಾ ರಾವ್ ವಂದಿಸಿದರು. ಡಾ. ಸುಧೀರ್ ರಾಜ್. ಕೆ ಮತ್ತು ಡಾ. ಸುಧೀರ್ ಸಹಕರಿಸಿದರು.







































