ಹೆಬ್ರಿ : ಬೈಕ್ ಅನ್ನು ಓವರ್ಟೇಕ್ ಮಾಡುವ ಧಾವಂತದಲ್ಲಿ ಕಾರೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾದ ಘಟನೆ ಆ. 18ರಂದು ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ಎಂಬಲ್ಲಿ ನಡೆದಿದೆ. ಪಂಕಜ್ ಎಂಬವರು ತನ್ನ ಕಾರನ್ನು ಓವರ್ ಟೇಕ್ ಮಾಡುವ ಸಂದರ್ಭ ದುರ್ಘಟನೆ ನಡೆದಿದ್ದು, ಪರಿಣಾಮ ಕಾರುಗಳು, ಬೈಕ್ ನಜ್ಜುಗುಜ್ಜಾಗಿದೆ. ಅಪಘಾತ ಪಡಿಸಿದ ಕಾರಿನಲ್ಲಿದ್ದ ತೀರ್ಥಹಳ್ಳಿ ಆರಗದ ನವೀನ, ವೆಂಕಟೇಶ ಗೌಡ, ಈರಣ್ಣ ಹಾಗೂ ಚಾಲಕ ಪಂಕಜ್ ರವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಕಾರಿನ ಚಾಲಕ ಶಿವಮೊಗ್ಗ ಮೂಲದ ಹನುಮಂತಪ್ಪ ಅವರು ಗಾಯಗೊಂಡಿದ್ದು, ಬೈಕ್ ಸವಾರ ಸುಧಾಕರ ಮತ್ತು ಸಹಸವಾರ ಬಾಬು ಪೂಜಾರಿರವರಿಗೆ ತರಚಿದ ಗಾಯವಾಗಿದೆ. ಹನುಮಂತಪ್ಪ ಅವರ ಕಾರು ಮಂಗಳೂರಿನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿರುವಾಗ ಶುಕ್ರವಾರ ಸಂಜೆ 5 ಗಂಟೆಗೆ ಜಕ್ಕನಮಕ್ಕಿ ಎಂಬಲ್ಲಿ ದುರ್ಘಟನೆ ನಡೆದಿದೆ ಎಂದು ಶಿವಮೊಗ್ಗ ಜಿಲ್ಲೆಯ ವಿನೋಬ ನಗರದ ಸಂತೋಷ್ ದೂರಿನಲ್ಲಿ ತಿಳಿಸಿದ್ದಾರೆ. ಹೆಬ್ರಿ ಪೊಲೀಸ್ ಠಾಣೆ ಎಸ್ಐ ಮಹೇಶ್ ಟಿ.ಎಂ., ಪಿಎಸ್ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ಓವರ್ಟೇಕ್ ಭರಾಟೆ – ಹೆಬ್ರಿಯಲ್ಲಿ ಸರಣಿ ಅಪಘಾತ




































