ಆ. 22ರಂದು ಕಾರ್ಕಳ – ಹೆಬ್ರಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಾರ್ಕಳ : 220/119/11 ಕೆವಿ ಕೇಮಾ‌ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 115 ಕೆವಿ ಫೀಡರ್ ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ನಿಟ್ಟೆ ವಾಟರ್ ಸಫ್ಲೈ, 110/11 ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 1150 ಪದವು ಫೀಡರ್ ಹಾಗೂ 110/11 ಕೆವಿ ಬೆಳ್ಮಣ್ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 116 ಕೆವಿ ಫೀಡರ್ ಗಳಾದ ಮುಂಡ್ಕೂರು, ನಂದಳಿಕೆ, ಬೋಳ ಮತ್ತು ಬೆಳ್ಮಣ್ ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಆ. 22 ರಂದು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಫ್ಲೈ, ಬೊರ್ಗಲ್ ಗುಡ್ಡೆ, ಪಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯತ್, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರೀಸ್, ದೂಪದಕಟ್ಟೆ, ಕೆಮ್ಮಣ್ಣು, ಗುಂಡ್ಯಡ್ಕ, ಕಲ್ಲಂಬಾಡಿ ಪದವು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೆಳ್ಮಣ್‌, ಬೆಳ್ಮಣ್‌ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಅಂಬರಾಡಿ, ಬೋಳ ಪಂಚಾಯತ್, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರಬೈಲು, ಪುಕ್ಕಲ್ಲು, ಕೆಂಪುಜೋರ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್ ತಾರ್, ಜಾರಿಗೆಕಟ್ಟೆ, ಪರಪ್ಪಾಡಿ, ಲೆಮಿನಾ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ. 33/11 ಕೆವಿ ಹೆಬ್ರಿ ಉಪವಿದ್ಯುತ್‌ ಸ್ಥಾವರದಿಂದ ಹೊರಡುವ 11 ಕೆವಿ ಕತ್ತೂರು, ವಾಟರ್ ಸಫ್ಲೈ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಆ. 22 ರಂದು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಮಂಡಾಡಿಜೆಡ್ಡು, ಕಣ್ಣೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಹೊಸೂರು, ಹುತ್ತುರ್ಕ ವಾಟರ್ ಸಫ್ಲೈ, ಕಲ್ಲಿಲ್ಲು ವಾಟರ್ ಸಫ್ಲೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.







































































error: Content is protected !!
Scroll to Top