ಕಾರ್ಕಳ – ಹೆಬ್ರಿ ಉಭಯ ತಾಲೂಕಿನಲ್ಲಿ 76ನೇ ಸ್ವಾತಂತ್ರೋತ್ಸವ ಸಂಭ್ರಮ

ಕಾರ್ಕಳ : ಕಾರ್ಕಳ – ಹೆಬ್ರಿ ಉಭಯ ತಾಲೂಕಿನೆಲ್ಲೆಡೆ ಸರಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧೆಡೆ 76ನೇ ಸ್ವಾತಂತ್ರೋತ್ಸವ ದಿನಾಚರಣೆ ನಡೆಯಿತು.

ಅನಂತಶಯನ ವೃತ್ತದಲ್ಲಿ ಪುರಸಭಾ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಶಾಸಕ ವಿ. ಸುನಿಲ್ ಕುಮಾರ್‌, ತಹಶೀಲ್ದಾರ್‌ ಅನಂತಶಂಕರ ಬಿ., ತಾ.ಪಂ. ಇಓ ಗುರುದತ್ತ್‌ ಎಂ.ಎನ್‌., ಪುರಸಭಾ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಎನ್‌ಸಿಸಿ, ಎನ್‌ಎಸ್‌ಎಸ್‌, ಸ್ಕೌಟ್ ಗೈಡ್ಸ್‌, ಸೇವಾದಳ ವಿದ್ಯಾರ್ಥಿಗಳಿಂದ ಹಾಗೂ ಪೊಲೀಸರಿಂದ ಅನಂತಶಯನದಿಂದ ಗಾಂಧಿ ಮೈದಾನದವರೆಗೆ ಪಥಸಂಚಲನ ನಡೆಯಿತು.
ಗಾಂಧಿ ಮೈದಾನದಲ್ಲಿ ತಹಶೀಲ್ದಾರ್‌ ಅನಂತಶಂಕರ ಬಿ. ಧ್ವಜಾರೋಹಣ ನೇರವೇರಿಸಿ ಶುಭಸಂಶನೆಗೈದರು. ಶಾಸಕ ವಿ. ಸುನಿಲ್‌ ಕುಮಾರ್‌, ತಾ.ಪಂ. ಇಓ ಗುರುದತ್ತ್‌ ಎಂ.ಎನ್.‌, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾರ್ಕಳ ಗ್ರಾಮಾಂತರ ಪಿಎಸ್‌ಐ ದಿಲೀಪ್‌, ನಗರ ಠಾಣಾ ಪಿಎಸ್‌ಐ ಸಂದೀಪ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಗಾಂಧಿ ಮೈದಾನದಲ್ಲಿ ನಡೆದ ಪಥಸಂಚಲನದ ಚಿತ್ರಣ
ಸೈನಿಕ ಸಮವಸ್ತ್ರದಲ್ಲಿ ಗಮನ ಸೆಳೆದ ಪುರಸಭಾ ಸದಸ್ಯ ಶುಭದ ರಾವ್
ಕಾರ್ಕಳ ರಾಮಕ್ಷತ್ರೀಯ ಸಂಘದಲ್ಲಿ ಕೆ. ಸತೀಶ್ ರಾವ್ ದ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಜೀವನ ನಮಗೆಲ್ಲರಿಗೂ ಮಾದರಿ. ದೇಶದ ಅಭಿವೃದ್ಧಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು. ಈ ಸಂದರ್ಭ ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್‌, ನಿವೃತ್ತ ಶಿಕ್ಷಕ ಪ್ರಭಾಕರ್‌ ರಾವ್‌ ಉಪಸ್ಥಿತರಿದ್ದರು. ಸುಕೇಶ್ ರಾವ್ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಮುಡಾರ್ ವಂದಿಸಿದರು.
ಜಿಲ್ಲಾ ಮಲೆಕುಡಿಯ ಸಂಘದ ವತಿಯಿಂದ ಮಾಳದ ಪೇರಡ್ಕದಲ್ಲಿರುವ ಸಂಘದ ಕೇಂದ್ರ ಕಛೇರಿಯ ಸಮುದಾಯ ಭವನದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಧ್ವಜಾರೋಹಣ ನೆರವೇರಿಸಿದರು. ರಾಜ್ಯಾಧ್ಯಕ್ಷ ಶ್ರೀಧರ ಗೌಡ, ಜಿಲ್ಲಾ ಸಂಘದ ಕೋಶಾಧಿಕಾರಿ ಸುಂದರಿ ಪೇರಡ್ಕ, ಸಂಘಟನಾ ಕಾರ್ಯದರ್ಶಿ ಸುಂದರ ರೆಂಜಾಳ ಹಾಗೂ ಸಮಾಜ ಬಾಂಧವರು ಉಪಸ್ಥಿತಿರಿದ್ದರು.
ಕಾರ್ಕಳ ಭಾರತೀಯ ಜನತಾ ಪಾರ್ಟಿ ವತಿಯಿಂದ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿತು. ಪಕ್ಷದ ಹಿರಿಯ ಮುಖಂಡ ಬಿ. ಪ್ರಭಾಕರ್ ಕಾಮತ್ ಧ್ವಜಾರೋಹಣ ನೆರವೇರಿಸಿ ಮೊದಲ ಸ್ವಾತಂತ್ರ್ಯ ಸಂಭ್ರಮದ ಅನುಭವವನ್ನು ಸ್ಮರಿಸಿದರು. ಜಿ. ವಿಜೇಂದ್ರ ಕಿಣಿ, ನಗರ ಅಧ್ಯಕ್ಷ ರವೀಂದ್ರ ಮೊಯ್ಲಿ, ಕಾರ್ಯದರ್ಶಿ ನಿರಂಜನ್ ಜೈನ್, ಮಂಡಲ ಕಾರ್ಯದರ್ಶಿ ಪ್ರಕಾಶ್ ರಾವ್, ಸುನಿಲ್ ಕೋಟ್ಯಾನ್, ಸಂತೋಷ್ ರಾವ್, ಅವಿನಾಶ್ ಶೆಟ್ಟಿ , ಪಲ್ಲವಿ ಪ್ರವೀಣ್, ಸಂಧ್ಯಾ ಮಲ್ಯ, ಪೂಜಾ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ಸೈನಿಕರ ವೇದಿಕೆ ಮೂಡಬಿದ್ರೆ-ಕಾರ್ಕಳ, ಸ್ವಚ್ಛ ಕಾರ್ಕಳ ಬ್ರಿಗೇಡ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆನೆಕೆರೆ ಬಳಿ ಇರುವ ಸದ್ಯೋಜಾತ ಉದ್ಯಾನವನದ ಅಮರ್ ಜವಾನ್ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ನಿಟ್ಟೆ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಅಕ್ಷಯಾ ಗೋಖಲೆ ಮಾತನಾಡಿ, ಎಳವೆಯಲ್ಲೇ ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ಇಂದು ಭಾರತದ ಬಾವುಟವು ಸ್ವಚ್ಛಂಧವಾಗಿ ಹಾರಾಡಲು ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವಿದೆ. ಅವರನ್ನೆಲ್ಲರನ್ನೂ ನೆನಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಮಾಜಿ ಸೈನಿಕರ ವೇದಿಕೆಯ ಸದಸ್ಯ ನವಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸೈನಿಕರ ವೇದಿಕೆಯ ಕಾರ್ಯದರ್ಶಿ ರತ್ನಾಕರ್ ಹೆಬ್ಬಾರ್ ಮತ್ತು ಸದಸ್ಯರು, ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು, ಹಿಂದೂ ಜಾಗರಣ ವೇದಿಕೆಯ ಮುಖಂಡರು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಸದಸ್ಯರು, ಕಾರ್ಕಳದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಸದಸ್ಯೆ ಸಹನಾ ಶ್ರೀಶ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಕಲ್ಲಗುಪ್ಪೆ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗ್ರಾ. ಪಂ. ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಜಿತ್ ಕುಮಾರ್, ಕಾರ್ಯದರ್ಶಿ ಸುಮಿತ್ರ ಇ., ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸುಮಿತ್ರ ಜೈನ್, ಸುಕುಮಾರ್, ನಿವೃತ್ತ ಇಸ್ರೋ ವಿಜ್ಞಾನಿ ಜನಾರ್ಧನ್ ರಾವ್, ಲಿಯೋಪಿರೇರಾ, ಮಹಮ್ಮದ್ ಗೌಸ್, ಉದಯ್ ಕುಮಾರ್, ಗಣೇಶ್, ಧನ ಶೇಖರ್ ತಂಗರಾಜು, ಕಸ್ತೂರಿ ಪೂವಪ್ಪ, ದಂಡಪಾಣಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮನೋಹರ್‌ ಸ್ವಾಗತಿಸಿದರು. ಸಹ ಶಿಕ್ಷಕಿ ವನಿತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಮುದ್ರಾಡಿ ಅಂಗನವಾಡಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚಂದ್ರಶೇಖರ ಭಟ್, ಸ್ವಾತಂತ್ರ್ಯಕ್ಕಾಗಿ ಹಿರಿಯರು ನಡೆಸಿದ ಹೋರಾಟ, ಅನುಭವಿಸಿದ ಯಾತನೆ, ನೋವು, ಬಲಿದಾನವನ್ನು ನಾವೆಲ್ಲರೂ ಅರಿತುಕೊಂಡು ಜವಾಬ್ದಾರಿಯಿಂದ ಮುನ್ನಡೆಯಬೇಕು. ಹಿರಿಯರ ಆದರ್ಶಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡು ನವಭಾರತದ ಸತ್ ಪ್ರಜೆಗಳಾಗಿ ಬದುಕನ್ನು ಸಾಗಿಸೋಣ. ಮಕ್ಕಳಿಗೆ ಬಾಲ್ಯದಲ್ಲಿಯೇ ರಾಷ್ಟ್ರ ಪ್ರೇಮ ಮೂಡಿಸುವ ಕಾರ್ಯ ಹೆತ್ತವರು ಮತ್ತು ಶಿಕ್ಷಕರಿಂದ ಆಗಬೇಕಾಗಿದೆ ಎಂದರು. ಅಂಗನವಾಡಿ ಸಮಿತಿ ಸದಸ್ಯ ವಿದ್ಯಾನಂದ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಶೆಟ್ಟಿಗಾರ್ ಹಳೇಬೀಡು ಮುದ್ರಾಡಿ, ಆಶಾ ಕಾರ್ಯಕರ್ತೆ ಇಂದಿರಾ, ಮಮತಾ ಶೆಟ್ಟಿಗಾರ್, ಅನಿತಾ ವಿ., ಸುಪ್ರಿಯಾ, ಸುಕನ್ಯಾ, ಲತಾ, ಪವಿತ್ರ, ಸುಮತಿ, ದಿವ್ಯಾ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸುಧಾ ಎಂ. ಕಾರ್ಯಕ್ರಮ ನಿರೂಪಿಸಿ, ಸಹಾಯಕಿ ಪೂರ್ಣಿಮಾ ವಂದಿಸಿದರು.
ಪಿ.ಆರ್. ಎನ್‌. ಅಮೃತ ಭಾರತಿ ಕಾಲೇಜಿನಲ್ಲಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ದ್ವಜಾರೋಹಣ ನೇರವೇರಿಸಿ ಮಾತನಾಡಿದರು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಸಿ. ಎ. ಎಂ. ರವಿ ರಾವ್, ಕಾರ್ಯದರ್ಶಿ ಹೆಚ್. ಗುರುದಾಸ್ ಶೆಣೈ, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಟ್ರಸ್ಟಿಗಳಾದ ಸತೀಶ್ ಪೈ‌, ಬಾಲಕೃಷ್ಣ ಮಲ್ಯ, ಸುಧೀರ್ ನಾಯಕ್, ವಿಷ್ಣುಮೂರ್ತಿ ನಾಯಕ್, ಪ್ರಾಂಶುಪಾಲ ಅಮರೇಶ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.




























































































































error: Content is protected !!
Scroll to Top