ಕಾರ್ಕಳ : ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು-ಮುಂಬೈ, ಗ್ರಾಮ ಪಂಚಾಯತ್ ಕುಕ್ಕುಂದೂರು ಹಾಗೂ ಅರಣ್ಯ ಇಲಾಖೆ ಕಾರ್ಕಳ ಸಹಯೋಗದಲ್ಲಿ ಸ್ವಾತಂತ್ರ್ಯ ದಿನದಂದು ಕುಕ್ಕುಂದೂರು ಗ್ರಾಮ ಪಂಚಾಯತ್ ಬಳಿ ವನಮಹೋತ್ಸವ ಆಚರಿಸಲಾಯಿತು.
ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಮಣಿ ಸಂಪತ್ ಸುವರ್ಣ, ಉಪಾಧ್ಯಕ್ಷ ಅನಿಲ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ಪಂಚಾಯತ್ ಕಾರ್ಯದರ್ಶಿ ಪ್ರಮೀಳಾ, ಮಾಜಿ ಅಧ್ಯಕ್ಷೆ ಸುಮನಾ ಎನ್. ರಾವ್ ಹಾಗೂ ಕುಕ್ಕುಂದೂರು ಫ್ರೆಂಡ್ಸ್ ಅಧ್ಯಕ್ಷ ಸಂದೀಪ್ ಪೂಜಾರಿ ಗಿಡ ನೆಟ್ಟರು. ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಮತ್ತು ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು-ಮುಂಬೈ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು-ಮುಂಬೈ ಸಂಘ ಕಳೆದ 10 ವರ್ಷಗಳಿಂದ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಸಂಘಟನೆಗಳೊಂದಿಗೆ ವನಮಹೋತ್ಸವ ಆಚರಿಸುತ್ತಿದ್ದು, ಕಳೆದ ಬಾರಿ ಸ್ವಚ್ಛ ಬ್ರಿಗೇಡ್ ಕಾರ್ಕಳ ಇವರ ಸಹಕಾರದಲ್ಲಿ 75ನೇ ಸ್ವಾತಂತ್ರೋತ್ಸವದ ಅಂಗವಾಗಿ 75 ಟ್ರೀ ಪಾರ್ಕ್ ಕಾರ್ಯಕ್ರಮವಾಗಿ 75 ಗಿಡಗಳನ್ನು ನೆಟ್ಟು ಸ್ವಾತಂತ್ರ್ಯ ಉದ್ಯಾನವನ ಮಾಡಲಾಗಿದೆ.
ಕುಕ್ಕುಂದೂರು ಫ್ರೆಂಡ್ಸ್ ವನಮಹೋತ್ಸವ






























































