ಕಾರ್ಕಳ : ಕಾರೊಂದು ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಬೈಲೂರಿನಲ್ಲಿ ಆ. 15 ರಂದು ಸಂಜೆ 4:30 ಹೊತ್ತಿಗೆ ಸಂಭವಿಸಿದೆ. ಕಾರು ಕಾರ್ಕಳದಿಂದ ಉಡುಪಿಗೆ ಸಾಗುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಬೈಲೂರಿನ ಎಸ್‌ಬಿಐ ಬ್ಯಾಂಕ್ ಸಮೀಪವಿರುವ ಶೇಖರ್ ಭಂಡಾರಿಯವರ ತರಕಾರಿ ಅಂಗಡಿಗೆ ನುಗ್ಗಿದೆ. ಪರಿಣಾಮವಾಗಿ ತರಕಾರಿ ಚೆಲ್ಲಾಪಿಳ್ಳಿಯಾಗಿದ್ದು, ಅಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ. ನಾಲ್ಕು ಜನ ಪ್ರಯಾಣಿಕರಿದ್ದು, ಕಾರು ಬೆಂಗಳೂರಿನದ್ದು ಎನ್ನಲಾಗುತ್ತಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಬೈಲೂರು : ತರಕಾರಿ ಅಂಗಡಿಗೆ ನುಗ್ಗಿದ ಕಾರು






























































