ಕಾರ್ಕಳ : ಚೈತನ್ಯ ಮಿತ್ರ ಮಂಡಳಿ ಮತ್ತು ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಕಲ್ಯಾ ಇವುಗಳ ಸಂಯುಕ್ತ ಆಶ್ರಯದಲ್ಲಿ 76ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲದ ಅಧ್ಯಕ್ಷೆ ಶಕುಂತಲಾ ಬಂಗೇರ ಧ್ವಜಾರೋಹಣಗೈದರು. ಚೈತನ್ಯ ಮಿತ್ರ ಮಂಡಳಿಯ ಗೌರವ ಅಧ್ಯಕ್ಷ ಅಶೋಕ್ ಎಸ್. ಪೂಜಾರಿ, ಯತೀಶ್ ಎನ್., ಮಂಜುನಾಥ ಕನ್‌ಸ್ಟ್ರಿಕನ್ ಮಾಲಕ ರೇಣು, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲದ ಸ್ಥಾಪಕ ಅಧ್ಯಕ್ಷೆ ರೂಪಾ ಯತೀಶ್, ಧೀರಾಜ್ ಶೆಟ್ಟಿ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಚೈತನ್ಯ ಮಿತ್ರ ಮಂಡಳಿ ಸ್ವಾತಂತ್ರ್ಯೋತ್ಸವ






























































