ಹೆಬ್ರಿ : 33/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 115 ಕೆವಿ ಹೆಬ್ರಿ, ಮುದ್ರಾಡಿ, ಕಳ್ತೂರು, ಶಿವಪುರ, ಚಾರ, ವಾಟರ್ ಸಫ್ಲೈ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಆ. 16 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಗುಳಿಬೆಟ್ಟು, ಹೆಬ್ರಿ ಪೇಟೆ, ಬಂಗಾರುಗುಡ್ಡೆ, ರಾಜೀವನಗರ, ಇಂದಿರಾನಗರ, ಮಠದಬೆಟ್ಟು, ಹೆಬ್ರಿ, ಬಲ್ಲಾಡಿ, ಉಪ್ಪಳ, ಜರವತ್ತು, ಬಚ್ಚಪ್ಪು, ಕಬ್ಬಿನಾಲೆ, ಮುದ್ರಾಡಿ, ಮುನಿಯಾಲು, ವರಂಗ ಮುಟ್ಟುಪಾಡಿ, ಪಡುಕುಡೂರು, ಕಾಡುಹೊಳೆ, ಮಂಡಾಡಿಜೆಡ್ಡು, ಕಳ್ತೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಶಿವಪುರ, ಸರ್ಕಾರಿ ಆಸ್ಪತ್ರೆ ಬಳಿ, ಕನ್ಯಾನ, ಚಾರ, ಹೊಸೂರು, ಹುತ್ತುರ್ಕೆ ವಾಟರ್ ಸಫ್ಲೈ, ಕಲ್ಲಿಲ್ಲು ವಾಟರ್ ಸಫ್ಲೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.




































































