ಆ. 16 : ಕಣಜಾರು ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಫುಟ್‌ಬಾಲ್‌ ಪಂದ್ಯಾಟ

ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್‌, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕಣಜಾರು ಶ್ರೀ ಆನಂದ ಶೆಟ್ಟಿ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಫುಟ್‌ಬಾಲ್‌ ಪಂದ್ಯಾಟ ಆ. 16 ರಂದು ಕಣಜಾರು ಶ್ರೀ ಆನಂದ ಶೆಟ್ಟಿ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ 8:30ಕ್ಕೆ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ವಿ. ಸುನಿಲ್‌ ಕುಮಾರ್‌, ನೀರೆ ಗ್ರಾ. ಪಂ. ಅಧ್ಯಕ್ಷೆ ಶಾಲಿನಿ, ವಿಕ್ರಮ್‌ ಹೆಗ್ಡೆ ಕಣಜಾರು, ಹರಿದಾಸ್‌ ಹೆಗ್ಡೆ, ಮಾಲಿನಿ ಜೆ. ಶೆಟ್ಟಿ, ಸುಮಿತ್‌ ಶೆಟ್ಟಿ ಕೌಡೂರು, ನಿರ್ಮಲಾ ರಾಣೆ, ರವೀಂದ್ರ ನಾಯಕ್‌ ನೀರೆ, ಜಗದೀಶ್‌ ಪೂಜಾರಿ ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.







































































































































error: Content is protected !!
Scroll to Top