ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಭೋಜ ಪೂಜಾರಿ – ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಪ್ರಭು

ಹೆಬ್ರಿ : ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಭೋಜ ಪೂಜಾರಿ ಬೈದ್ರಬೆಟ್ಟು ಹಾಗೂ ಉಪಾಧ್ಯಕ್ಷರಾಗಿ ಸುಬ್ರಮಣ್ಯ ಪ್ರಭು ಗಿಲ್ಲಾಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ. 7ರಂದು ಸಹಕಾರಿ ಸಂಘದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಸಂಘದ ನಿರ್ದೇಶಕರಾದ ಸೂರ್ಯ ಬಂಗೇರ, ಭೋಜ ನಾಯ್ಕ, ದಯಾನಂದ ಪೂಜಾರಿ, ಶಂಕರ ನಾಯ್ಕ, ದಿವಾಕರ ಪೂಜಾರಿ, ಕರುಣಾಕರ ನಾಯ್ಕ, ಬೋಜ ಪೂಜಾರಿ, ದಿವ್ಯ ಸರೋಜಾ, ಅಮಿತಾ ಓಕುಡ, ಜಿ.ಪಂ. ನಿಕಟಪೂರ್ವ ಸದಸ್ಯೆ ಜ್ಯೋತಿ ಹರೀಶ್, ಹೆಬ್ರಿ ತಾ.ಪಂ. ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಹೆಬ್ರಿ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಎಚ್. ಕೆ. ಸುಧಾಕರ್, ಗ್ರಾ.ಪಂ. ಸದಸ್ಯ ತಾರನಾಥ್ ಬಂಗೇರ, ಶೇಖರ್ ತಾಣ, ಜಯವರ್ಧನ, ಸುರೇಶ್ ಭಂಡಾರಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

































































error: Content is protected !!
Scroll to Top