ಕಾರ್ಕಳ : ಮಾರುಕಟ್ಟೆಯಲ್ಲಿ ಬೀನ್ಸ್ ದರದಲ್ಲಿ ಏರಿಕೆ ಕಂಡಿದೆ. ಇನ್ನು ಟೊಮ್ಯಾಟೋ ಬೆಲೆ ಮುಂದಿನ ವಾರದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಕಾರ್ಕಳದ ತರಕಾರಿ ವ್ಯಾಪರಸ್ಥರು. ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಪೂರೈಕೆಯಲ್ಲಿ ಕೊರತೆಯಿದ್ದು, ಬೆಲೆ ಏರಿಕೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಕೆಜಿಗೆ 60 ರೂ. ಇದ್ದ ದರ 90 ರೂ. ದಾಟಿದೆ. ಇನ್ನು ಶ್ರಾವಣ ಆರಂಭವಾಗುತ್ತಿದ್ದಂತೆ ಬೆಲೆ ಮತ್ತೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುತ್ತಾರೆ ವ್ಯಾಪಾರಿಗಳು. ಕೋಳಿ ಮಾಂಸದ ಬೆಲೆ ಯಥಾಸ್ಥಿತಿಯಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50, ಮುಳ್ಳುಸೌತೆ : 50-60 ರೂ., ಶುಂಠಿ : 180 -240 ರೂ., ಟೊಮ್ಯಾಟೋ : 100-120 ರೂ. , ಚೀನಿಕಾಯಿ : 25 ರೂ., ನೀರುಳ್ಳಿ : 25 – 30 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 200- 240 ರೂ., ಸೌತೆ : 20 – 25 ರೂ., ಬೀನ್ಸ್ : 100 – 120 ರೂ., ಬಿಳಿ ಬೀನ್ಸ್ – 90 ರೂ., ಕಾಯಿಮೆಣಸು : 80 ರೂ., ಕ್ಯಾರೆಟ್ : 70 ರೂ., ಬೀಟ್ರೋಟ್ : 50 ರೂ., ಕ್ಯಾಬೇಜ್ : 25 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ. ಬೆಂಡೆ : 50 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 40 ರೂ., ದೊಣ್ಣೆಮೆಣಸು : 100 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ : 60 ರೂ., ಬಸಳೆ – 60 ರೂ., ಹೀರೆ ಕಾಯಿ : 80 -100 ರೂ., ಘಾಟಿ ಹೀರೆ : 70 ರೂ.,
ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120 – 200ರೂ., ದಾಳಿಂಬೆ : 120 – 200 ರೂ. , ಮಾವು : 80 -100 ರೂ., ದ್ರಾಕ್ಷಿ : 100 -140 ಕಲ್ಲಂಗಡಿ : 20 – 35ರೂ., ಬಾಳೆ : 90 ರೂ., ಕಿತ್ತಳೆ : 120- 140 ರೂ., ಮೂಸಂಬಿ 60-: 80 ಸೀತಾಫಲ – 120 ರೂ., ರಾಂಬೂಟನ್ : 300 ರೂ., ಪಪ್ಪಾಯ : 40 ರೂ.,

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 250 ರೂ., ಬಾಯ್ಲರ್ : 170 ರೂ. (ಸ್ಕಿನ್ ಔಟ್ : 200 ರೂ. )
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.






































































