ಗೆಲ್ಲಲು ಹೊರಟವರಿಗೆ ನಿಜವಾದ ಬೂಸ್ಟರ್ ಡೋಸ್ ಈ ಸೂತ್ರಗಳು
ದಿಗಂತದ ಕಡೆಗೆ ದೃಷ್ಟಿಯನ್ನು ನೆಟ್ಟು ಸಾಧನೆಯ ಹಸಿವು ಮತ್ತು ಕನಸಿನ ಕಸುವುಗಳನ್ನು ಜತೆಗೆ ಜೋಡಿಸಿಕೊಂಡು ನಾವು ಖಂಡಿತ ಗೆಲ್ಲಲೇಬೇಕು ಎಂದು ಹೊರಟಾಗ ಈ ಸೂತ್ರಗಳು ಖಂಡಿತ ನಿಮ್ಮನ್ನು ಗೆಲ್ಲಿಸುತ್ತವೆ.
1) ಗಮ್ಯ-ನಾವು ತಲುಪಬೇಕಾದ ಸ್ಥಳದ ಸರಿಯಾದ ಅರಿವು.
2) ದಾರಿ-ನಾವು ಕ್ರಮಿಸಬೇಕಾದ ನ್ಯಾಯಯುತವಾದ ಮತ್ತು ನೇರವಾದ ದಾರಿ.

3) ಆತ್ಮವಿಶ್ವಾಸ-ಖಂಡಿತ ಗಮ್ಯವನ್ನು ತಲುಪುವೆ ಎಂಬ ನಂಬಿಕೆ ನಮಗೆ ಇಂಧನ ಆಗುತ್ತದೆ.
4)ಎಚ್ಚರ-ಎಂದಿಗೂ ತಪ್ಪು ದಾರಿ ಹಿಡಿಯುವುದಿಲ್ಲ ಎಂಬ ನಮ್ಮ ನಿರ್ಧಾರ
5) ಮಾರ್ಗದರ್ಶಕರು-ಕೈ ಹಿಡಿದು ನಡೆಸುವ ಮಂದಿ ಸದಾ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಾರೆ.
6) ಇಚ್ಛಾಶಕ್ತಿ-ಎಲ್ಲೂ ನಾನು ಕ್ವಿಟ್ ಮಾಡುವುದಿಲ್ಲ ಎಂಬ ಹಠ. ಅದೇ ನಮಗೆ ಲುಬ್ರಿಕೆಂಟ್.
7) ಪಾಸಿಟಿವ್ ಥಿಂಕಿಂಗ್-ಎಂತಹ ಸವಾಲು, ಸಮಸ್ಯೆ ಎದುರಾದರೂ ಎದುರಿಸಿ ನಿಲ್ಲುವೆ ಎನ್ನುವ ಗಟ್ಟಿ ನಿಲುವು.
8) ಕಾಳಜಿ-ನಮ್ಮ ಜತೆಗೆ ಹೆಜ್ಜೆ ಹಾಕಿ ನಡೆಯುವವರ ಬಗ್ಗೆ ತೀವ್ರವಾದ ಕಾಳಜಿ.
8) ಸ್ಟ್ರಾಟಜಿ-ದುರ್ಗಮವಾದ ಹಾದಿಯಲ್ಲಿ ನಡೆಯುವಾಗ ಅದಕ್ಕೆ ಪೂರಕವಾದ ತಂತ್ರಗಾರಿಕೆ ಮತ್ತು ಯೋಜನೆ.
10) ತಾಳ್ಮೆ-ನಮ್ಮೊಳಗಿನ ಸತ್ವವನ್ನು ಹೆಚ್ಚಿಸುವ ಮತ್ತು ನಮ್ಮನ್ನು ಎಂದಿಗೂ ಸೋಲಲು ಬಿಡದ ಟೆಂಪರಮೆಂಟ್.
11) ಫೋಕಸ್-ಒಂದಿಷ್ಟೂ ವಿಚಲಿತವಾಗದ ಮನಸ್ಥಿತಿ. ಆಮಿಷಗಳಿಗೆ, ಅಡ್ಡದಾರಿಗಳಿಗೆ ನಮ್ಮನ್ನು ಎಳೆಯದ ಗಟ್ಟಿ ಮನಸ್ಸು.
12) ಅಹಂ ರಾಹಿತ್ಯ-ಒಂದಿಷ್ಟೂ ಅಹಂ ಇಲ್ಲದ, ಎಷ್ಟು ಸಾಧನೆ ಮಾಡಿದರೂ ನಾನೇನು ಮಾಡಿಲ್ಲ ಎನ್ನುವ ವಿನಮ್ರ ಭಾವನೆ.
13) ನಿರಂತರತೆ-ಯಾವ ಏರು ತಗ್ಗಿನ ರಸ್ತೆಯಲ್ಲಿಯೂ ವೇಗವನ್ನು ಕಳೆದುಕೊಳ್ಳದ ಶಕ್ತಿ.
14) ಕಾಂಪಿಟೆನ್ಸಿ-ಯಾವ ಸ್ಪರ್ಧೆಗೂ ನಮ್ಮನ್ನು ತೆರೆದುಕೊಳ್ಳುವ ಮತ್ತು ಎದುರಿಸಿ ನಿಲ್ಲುವ ಗಟ್ಟಿತನ.
15) ನಮ್ಮ ಕಾಂಪಿಟಿಟರ್-ನೀವು ಒಪ್ಪುತ್ತೀರೋ ಬಿಡುತ್ತೀರೋ ಗೊತ್ತಿಲ್ಲ. ನಮ್ಮ ಸ್ಪರ್ಧಿಗಳು ನಮ್ಮನ್ನು ಸದಾ ಜಾಗೃತವಾಗಿ ಇಟ್ಟುಕೊಂಡು ಗೆಲುವಿನ ಕಡೆಗೆ ಮುನ್ನಡೆಸುತ್ತಾರೆ.
16) ಸವಾಲುಗಳು-ನಾವು ಒಳ್ಳೆಯ ಚಾಲಕ ಆಗಬೇಕಾದರೆ ಹೆದ್ದಾರಿಯಲ್ಲಿ ಗಾಡಿ ಓಡಿಸುವುದಲ್ಲ. ದುರ್ಗಮವಾದ ರಸ್ತೆಗಳನ್ನು ಆಯ್ಕೆ ಮಾಡಬೇಕು.
16) ಆದ್ಯತೆಗಳು-ಆಯ್ಕೆಗಳಲ್ಲಿ ಸರಿಯಾದದ್ದನ್ನು ಮತ್ತು ಸೂಕ್ತವಾದದ್ದನ್ನು ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳುವುದು.
17) ಐಕಾನಿಕ್ ಶಕ್ತಿ-ನಮಗೆ ಸದಾ ಕಾಲ ಪ್ರೇರಣೆ ನೀಡುವ ವ್ಯಕ್ತಿತ್ವ ನಮ್ಮ ಜತೆಗೆ ಇದ್ದಷ್ಟು ನಮ್ಮ ಗೆಲುವು ಸುಲಭ ಆಗುತ್ತದೆ.

18) ಉತ್ಕೃಷ್ಟತೆ-ಯಾವಾಗಲೂ ಉತ್ತಮ ಮತ್ತು ಸರಿಯಾದದ್ದನ್ನು ಆರಿಸುವ ಪ್ರೌಢಿಮೆ.
19)ಪ್ಲಾನಿಂಗ್-ಸರಿಯಾದ ಯೋಜನೆ ಇದ್ದರೆ ಸೋಲು ಕೂಡ ಸೋಲುತ್ತದೆ.
20) ಉದ್ದೇಶದ ಸ್ಪಷ್ಟತೆ-ನಮ್ಮ ಪ್ರಯಾಣದ ಉದ್ದೇಶ ನಮಗೆ ಸ್ಪಷ್ಟವಾಗಿದ್ದರೆ ಗೆಲುವು ಸುಲಭ. ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಸುಲಭ ಆಗುತ್ತದೆ.
21) ಅನುಭವದಿಂದ ಕಲಿಯುವುದು-ಬೇರೆಯವರ ತಪ್ಪುಗಳಿಂದ ಪಾಠ ಕಲಿಯುವುದು ಸುಲಭ. ಆದರೆ ನಮ್ಮದೇ ತಪ್ಪುಗಳಿಂದ ಪಾಠ ಕಲಿಯುವುದು ತುಂಬಾನೇ ಮುಖ್ಯ.
22) ಟೀಮ್ ವರ್ಕ್-ತಂಡವಾಗಿ ಕೆಲಸ ಮಾಡುವ ಖುಷಿ ನಮ್ಮ ಗೆಲುವನ್ನು ಖಾತರಿ ಮಾಡುತ್ತದೆ .
23) ಸ್ವಯಂಶಿಸ್ತು-ನಮಗೆ ನಾವೇ ಹಾಕಿಕೊಂಡ ಅನುಶಾಸನ ಮತ್ತು ಶಿಸ್ತುಗಳು ನಮ್ಮನ್ನು ಸೋಲಲು ಬಿಡುವುದಿಲ್ಲ.
24) ವಾಸ್ತವದ ಪ್ರಜ್ಞೆ-ಮನಸಿನ ಭ್ರಮೆಗಳಿಂದ ಹೊರಬಂದು ವಾಸ್ತವದ ಪ್ರಜ್ಞೆಯೊಂದಿಗೆ ಮುನ್ನಡೆಯುವುದು.
25) ಅವಲೋಕನ-ಪಯಣ ಮಾಡಿದ ದಾರಿಯನ್ನು ಒಮ್ಮೆ ಹಿಂತಿರುಗಿ ನೋಡಿ ಮುಂದಿನ ಗಮ್ಯಕ್ಕೆ ತಯಾರಿ ಮಾಡುವುದು.
ಇವಿಷ್ಟನ್ನು ಬಂಡವಾಳ ಮಾಡಿಕೊಂಡು ಹೊರಡಿ. ನಿಮ್ಮನ್ನು ಸೋಲಿಸಲು ನಿಮ್ಮ ಶತ್ರುಗಳಿಗೂ ಸಾಧ್ಯ ಇಲ್ಲ.
ನಿಮಗೆ ಶುಭವಾಗಲಿ.

































