ಕಾರ್ಕಳ : ಮೂರು ಮಾರ್ಗದಿಂದ ಬಂಡೀಮಠದವರಿಗೆ ಒಳಚರಂಡಿ ಸೋರಿಕೆಯ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕ್ರಮಕ್ಕೆ ಪುರಸಭೆ ಮುಂದಾಗಿದೆ. ಶನಿವಾರ ಅಂಬೇಡ್ಕರ್ ವೃತ್ತ ಸಮೀಪದ ಒಳಚರಂಡಿಯ ಮ್ಯಾನ್ ಹೋಲ್‌ನ ಬ್ಲಾಕ್ ತೆಗೆಯುವ ಕಾರ್ಯ ನಡೆಯುತ್ತಿದೆ.
ನ್ಯೂಸ್ ಕಾರ್ಕಳ ವರದಿ
ನಗರದ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಸೋರಿಕೆಯಿಂದಾಗಿ ವಾಹನ ಸವಾರರು, ಆಟೋರಿಕ್ಷಾ ಚಾಲಕರಿಗೆ, ಅಂಗಡಿಯವರಿಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ಕುರಿತು ಜು. 27 ರಂದು ನ್ಯೂಸ್ ಕಾರ್ಕಳ ಸಂಪೂರ್ಣವಾದ ವೀಡಿಯೋ ಸ್ಟೋರಿ ವರದಿ ಮಾಡಿತ್ತು.


































































