ಪೇಟೆ ಧಾರಣೆ : ತರಕಾರಿ ಬೆಲೆ ಯಥಾಸ್ಥಿತಿ – ಹಣ್ಣಿನ ದರದಲ್ಲಿ ಏರಿಳಿತ

ಕಾರ್ಕಳ : ಮಾರುಕಟ್ಟೆಯಲ್ಲಿ ಟೋಮ್ಯಾಟೋ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಉಳಿದ ತರಕಾರಿಗಳ ಬೆಲೆ ಯಥಾಸ್ಥಿತಿಯಿದೆ. ಹಣ್ಣಿನ ಬೆಲೆಯಲ್ಲಿ ಏರಿಳಿತ ಕಂಡಿದೆ. ಸೇಬು ಹಣ್ಣಿನಲ್ಲಿ ಭಾರತೀಯ ತಳಿಗಳ ಇಳುವರಿ ಪ್ರಾರಂಭವಾಗಿದೆ. ದಾಳಿಂಬೆ ಹಣ್ಣಿನ ಬೆಲೆ ತುಸು ಇಳಿಕೆ ಕಂಡಿದೆ. ಕೋಳಿ ಮಾಂಸದ ಬೆಲೆ ಯಥಾಸ್ಥಿತಿಯಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50, ಮುಳ್ಳುಸೌತೆ : 50-60 ರೂ., ಶುಂಠಿ : 180 -240 ರೂ., ಟೊಮ್ಯಾಟೋ : 130 ರೂ. , ಚೀನಿಕಾಯಿ : 25 ರೂ., ನೀರುಳ್ಳಿ : 25 – 30 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 180 – 240 ರೂ., ಸೌತೆ : 20 – 25 ರೂ., ಬೀನ್ಸ್‌ : 70 – 80 ರೂ., ಬಿಳಿ ಬೀನ್ಸ್‌ – 60 ರೂ., ಕಾಯಿಮೆಣಸು : 80 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ. ಬೆಂಡೆ : 50 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 40 ರೂ., ದೊಣ್ಣೆಮೆಣಸು : 100 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಬಸಳೆ – 60 ರೂ., ಹೀರೆ ಕಾಯಿ : 80 ರೂ., ಘಾಟಿ ಹೀರೆ : 50 – 60 ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 260 ರೂ., ದೇಶೀಯ ಸೇಬು : 200 ರೂ., ದಾಳಿಂಬೆ : 160 ರೂ., ಮಾವು : 60- 80 ರೂ., ದ್ರಾಕ್ಷಿ : 120 ರೂ., ಕಲ್ಲಂಗಡಿ : 40 ರೂ., ಬಾಳೆ : 80 ರೂ., ಕಿತ್ತಳೆ : 140 – 150 ರೂ., ಮೂಸಂಬಿ : 60- 80 ರೂ., ಸೀತಾಫಲ : 140 – 160 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 250 ರೂ., ಬಾಯ್ಲರ್‌ : 170 ರೂ. (ಸ್ಕಿನ್‌ ಔಟ್‌ 190 ರೂ.) ಬೆಲೆ ಇದೆ ಎಂದು ಮೇಘಾ ಚಿಕನ್‌ ಸ್ಟಾಲ್‌ ಮಾಲಕ ದಿನೇಶ್‌ ಪೂಜಾರಿ ಹೇಳಿದ್ದಾರೆ.

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.

































































































































































error: Content is protected !!
Scroll to Top