ಪಾಸಾಗಿದ್ದಕ್ಕೆ ಟ್ರೀಟ್ ಕೊಡು ಎಂದು ನಿತ್ಯ ಕಿರುಕುಳ
ಮಂಗಳೂರು : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅನ್ಯಮತೀಯ ಆಟೋರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಒಂಬತ್ತನೇ ತರಗತಿ ಪಾಸಾಗಿದ್ದಕ್ಕೆ ಟ್ರೀಟ್ ಏನೂ ಇಲ್ವಾ..? ಚಾಕಲೇಟ್ ಇಲ್ಲದಿದ್ದರೆ ಬೇರೇನಾದರೂ ಕೊಡು ಎಂದು ಆಟೋಚಾಲಕ ವಿದ್ಯಾರ್ಥಿನಿಯನ್ನು ನಿತ್ಯ ಪೀಡಿಸುತ್ತಿದ್ದ.
ಅಂಬ್ಲಮೊಗರು ಗ್ರಾಮದ ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿನಿಗೆ ಅದೇ ಗ್ರಾಮದ ಆಟೋರಿಕ್ಷಾ ಚಾಲಕ ಇಕ್ಬಾಲ್ ಎಂಬಾತ ಲೈಂಗಿಕ ಕಿರುಕುಳ ಕೊಟ್ಟಿದ್ದು ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯು ಪೋಷಕರೊಂದಿಗೆ ಕೆಲ ತಿಂಗಳ ಹಿಂದೆ ಆಟೋದಲ್ಲಿ ಮನೆಗೆ ತೆರಳಿದ್ದು ಈ ವೇಳೆ ಆಟೋ ಚಾಲಕ ಇಕ್ಬಾಲ್ ವಿದ್ಯಾರ್ಥಿನಿಯನ್ನು ಮಾತನಾಡಿಸಿದ್ದ ಎನ್ನಲಾಗಿದೆ. ಆನಂತರ, ಇತ್ತೀಚೆಗೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಬೆಳಗ್ಗೆ ಶಾಲೆಗೆ ತೆರಳಲು ನಿಂತಿದ್ದ ಸಂದರ್ಭದಲ್ಲಿ ಪಾಸಾಗಿದ್ದಕ್ಕೆ ಟೀಟ್ ಇಲ್ವಾ, ಚಾಕಲೇಟ್ ಇಲ್ಲದಿದ್ದರೆ ಬೇರೇನಾದರೂ ಕೊಡು, ನಿನ್ನನ್ನ ನಾನು ಆಟೋದಲ್ಲಿ ಫ್ರೀಯಾಗಿ ಕರ್ಕೊಂಡು ಹೋಗ್ತಿನಿ ಎಂದು ಪೀಡಿಸಿ ಬಾಲಕಿಯ ಕೈ ಮತ್ತು ಎದೆ ಭಾಗವನ್ನ ಸ್ಪರ್ಶಿಸಿ ಅಶ್ಲೀಲವಾಗಿ ಪ್ರೈಯಿಂಗ್ ಕಿಸ್ ಕೊಡುತ್ತಿದ್ದನಂತೆ. ಬಾಲಕಿ ರಿಕ್ಷಾ ಚಾಲಕನ ಕಾಟ ತಾಳಲಾರದೆ ನಿನ್ನೆ ಮನೆಮಂದಿಗೆ ವಿಚಾರ ತಿಳಿಸಿದ್ದಾಳೆ.
ಮನೆಮಂದಿ ಈ ಬಗ್ಗೆ ಚಾಲಕನನ್ನು ಪ್ರಶ್ನಿಸಲು ಕುತ್ತಾರಿನ ಆಟೋರಿಕ್ಷಾ ಸ್ಟ್ಯಾಂಡ್‌ಗೆ ತೆರಳಿದ್ದು, ಇದರ ಸುಳಿವು ಸಿಕ್ಕಿ ಆರೋಪಿ ಪಲಾಯನ ಮಾಡಿದ್ದ. ಬಳಿಕ ವಿದ್ಯಾರ್ಥಿನಿ ಪೋಷಕರು ಕೊಣಾಜೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.















































































