ಕಾರ್ಕಳ : ಗಣಿತನಗರ ಜ್ಞಾನಸುಧಾ ಪ. ಪೂ. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ)ಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ ನಾಯಕ್ ಆಲ್ ಇಂಡಿಯಾ (ಜನರಲ್ ಮೆರಿಟ್) ದಲ್ಲಿ 3918ನೇ ರ‍್ಯಾಂಕ್ ಮತ್ತು ಸಮೃದ್ದ್ ನೆಲ್ಲಿ (ಜನರಲ್‌ಮೆರಿಟ್) 5769ನೇ ರ‍್ಯಾಂಕ್ ಪಡೆದು ಪ್ರತಿಷ್ಠಿತ ಖರಗ್‌ಪುರದ ಐ.ಐ.ಟಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ಕೆ.ಸಿ.ಇ.ಟಿ. ಇಂಜಿನಿಯರಿಂಗ್‌ನಲ್ಲಿಯೂ ಧನ್ವಿತ್ ನಾಯಕ್ 87ನೇ ಹಾಗೂ ಸಮೃದ್ದ್ ನೆಲ್ಲಿ 349ನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದರು. ಜ್ಞಾನಸುಧಾದ ವಿದ್ಯಾರ್ಥಿಗಳು ಜೆ.ಇ.ಇ ಅಡ್ವಾನ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಹತ್ತು ಸಾವಿರದೊಳಗೆ 10 ರ‍್ಯಾಂಕ್, ನೀಟ್ ಪರೀಕ್ಷೆಯಲ್ಲಿ 93 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು ಹಾಗೂ ಕೆ.ಸಿ.ಇ.ಟಿಯಲ್ಲಿ 105 ವಿದ್ಯಾರ್ಥಿಗಳು 5000 ದೊಳಗಿನ ರ‍್ಯಾಂಕ್ ಗಳಿಸಿರುವುದನ್ನು ಸ್ಮರಿಸಿಕೊಳ್ಳಬಹುದು. ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಕಾರ್ಯ ವೈಖರಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಶ್ಲಾಘಿಸಿದ್ದಾರೆ.














































































