ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣ : ಎನ್‌ಐಎ ಅಧಿಕಾರಿಗಳಿಂದ ಸ್ಥಳ ಮಹಜರು

ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಆರೋಪಿ ಶಂಕಿತ ಉಗ್ರ ಶಾರಿಕ್​ನನ್ನು ಜು. 25 ರಿಂದ ಆ. 3 ರವರೆಗೆ ಎನ್​ಐಎ(NIA) ಕಸ್ಟಡಿಗೆ ಪಡೆದಿದೆ. ಆತನ ಜೊತೆಗೆ ಸೈಯದ್ ಯಾಸಿನ್‌ನನ್ನು ಕಸ್ಟಡಿಗೆ ನೀಡಲಾಗಿದ್ದು, ಒಟ್ಟು 10 ದಿನಗಳ ಕಾಲ ತನಿಖೆ ನಡೆಯಲಿದೆ.

ಸ್ಥಳ ಮಹಜರು
ಸ್ಫೋಟ ಹಿನ್ನಲೆ ಎನ್‌ಐಎ ತನಿಖೆ ನಡೆಸುತ್ತಿದೆ. ಈ ಹಿನ್ನಲೆ ಮೈಸೂರು, ಮಡಿಕೇರಿ ಮತ್ತು ಮಂಗಳೂರಿನಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆದಿದ್ದು, ಅದನ್ನು ಪೂರ್ಣಗೊಳಿಸಿ ಅಧಿಕಾರಿಗಳು ಶಾರಿಕ್​ನನ್ನು ವಾಪಸ್ ಬೆಂಗಳೂರಿಗೆ ಕರೆತಂದಿದ್ದಾರೆ. ಜೊತೆಗೆ ಮೈಸೂರಿನಲ್ಲಿ ಶಾರಿಕ್ ವಾಸ್ತವ್ಯವಿದ್ದ ಸ್ಥಳ. ಹಣ ಪಡೆದ ಜಾಗ, ಮೈಸೂರಿನಿಂದ ಬಸ್ ಹತ್ತಿ ಮಡಿಕೇರಿಗೆ ಹೊರಟಿದ್ದು, ಮಡಿಕೇರಿಯಲ್ಲಿ ಬಸ್ ಬದಲಾಯಿಸಿ ಮಂಗಳೂರು ಕಡೆಗೆ ಹೋಗಿದ್ದು, ಮಂಗಳೂರಿನಲ್ಲಿ ಬಸ್ ಇಳಿದ ಜಾಗ. ತನ್ನ ಶರ್ಟ್ ಮತ್ತು ಪ್ಯಾಂಟ್ ಬದಲಾಯಿಸಿಕೊಂಡ ಸ್ಥಳ. ಆಟೋ ಹತ್ತಿಕೊಂಡ ಜಾಗ ಮತ್ತು ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳ ಸೇರಿ ಇತರ ಎಲ್ಲಾ ಸ್ಥಳಗಳ ಮಹಜರು ಪ್ರಕ್ರಿಯೆಯನ್ನ ಅಧಿಕಾರಿಗಳು ನಡೆಸಿದ್ದಾರೆ.

ಘಟನೆಯ ವಿವರ
2022ರ ನವೆಂಬರ್ 19 ರಂದು ಮಂಗಳೂರಿನಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು ಈ ಸ್ಪೋಟದಿಂದ ಬಯಲಾಗಿತ್ತು. ಮಂಗಳೂರಿನಲ್ಲಿ 2020 ರಲ್ಲಿ ಬರೆಯಲ್ಪಟ್ಟಿದ್ದ ಉಗ್ರ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ತಂದ ಬಾಂಬ್ ಅವನ ಕಾಲ ಬುಡದಲ್ಲೇ ಸ್ಪೋಟಗೊಂಡು ಆತ ಅಲ್ಲೇ ಸಿಕ್ಕಿಹಾಕಿಕೊಂಡಿದ್ದ. ಹೌದು ಈತ ಮೈಸೂರಿನ ತನ್ನ ಬಾಡಿಗೆ ಮನೆಯಲ್ಲಿ ಕುಕ್ಕರ್ ಬಾಂಬ್ ತಯಾರು ಮಾಡಿದ್ದ. ಅಲ್ಲಿಂದ ಮಂಗಳೂರಿಗೆ ತಂದು ಸಿಡಿಸುವ ಪ್ಲಾನ್ ಇತ್ತು.

ನವೆಂಬರ್ 19 ರ ಬೆಳಗ್ಗೆ ಮೈಸೂರಿನಿಂದ ತಾನು ತಯಾರಿಸಿದ್ದ ಕುಕ್ಕರ್ ಬಾಂಬ್ ಸಮೇತ ಮಂಗಳೂರಿನ ಕಡೆ ಹೊರಟಿದ್ದ. ಮೈಸೂರಿನ ತನ್ನ ಬಾಡಿಗೆ ಮನೆಯಿಂದ ಆಟೋದಲ್ಲಿ ಬಾಂಬ್​ನ್ನು ಇಟ್ಟುಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್​ಗೆ ಬಂದಿಳಿದಿದ್ದ. ಅಲ್ಲಿಂದ ನೇರವಾಗಿ ಕೆ.ಎಸ್.ಆರ್.ಟಿ.ಸಿ ಬಸ್​ ಮೂಲಕ ಮಂಗಳೂರಿಗೆ ಹೊರಟಿದ್ದು, ಕುಶಾಲನಗರ, ಮಡಿಕೇರಿ, ಸುಳ್ಯ, ಪುತ್ತೂರು ಮಾರ್ಗವಾಗಿ ಬಂದು ಮಂಗಳೂರಿನ ಪಡೀಲಿನಲ್ಲಿ ಇಳಿದಿದ್ದ. ಬಳಿಕ ಕುಕ್ಕರ್ ಬಾಂಬ್​ಗೆ ಟೈಮರ್ ಫಿಕ್ಸ್ ಮಾಡಿಕೊಂಡು ಪಂಪ್ ವೆಲ್ ಡ್ರಾಪ್ ಎಂದು ಹೇಳಿ ಆಟೋ ಹತ್ತಿದ್ದು, ಆಟೋ ಪಂಪ್ ವೆಲ್ ತಲುಪೊ ಮಧ್ಯದಲ್ಲೇ ಬಾಂಬ್​ನಲ್ಲಿದ್ದ ಝೆಲ್​ಗೆ ಬೆಂಕಿ ಹೊತ್ತಿಕೊಂಡು ಬ್ಲಾಸ್ಟ್ ಆಗಿತ್ತು. ಆದ್ರೆ ಅದೃಷ್ಟವಶಾತ್​ ಡಿಟೊನೇಟರ್ ಮೂಲಕ ಬ್ಲಾಸ್ಟ್ ಆಗದೆ ಇದ್ದಿದ್ದರಿಂದ ಆಗುವ ಭಾರೀ ಅನಾಹುತ ತಪ್ಪಿತ್ತು.































































































































































error: Content is protected !!
Scroll to Top