ರಾಯಗಢ : ಭೂಕುಸಿತದಿಂದ 4 ಸಾವು, 22 ಜನರ ರಕ್ಷಣೆ

ಅವಶೇಷಗಳಡಿ ಅನೇಕ ಮಂದಿ ಸಿಲುಕಿರುವ ಶಂಕೆ

ಮುಂಬಯಿ : ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ನಾಲ್ಕು ಮಂದಿ ಸಾವಿಗೀಡಾಗಿದ್ದು, ಅನೇಕ ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಎನ್‌ಡಿಆರ್‌ಎಫ್‌ ತಂಡ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ಇಷ್ಟರ ತನಕ 22 ಮಂದಿಯನ್ನು ಅವಶೇಷದಡಿಯಿಂದ ರಕ್ಷಿಸಲಾಗಿದೆ. ಇನ್ನಷ್ಟು ಮಂದಿ ಒಳಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ರಾಯಗಢ ಜಿಲ್ಲೆಯ ಖಲಾಪುರ ತಾಲೂಕಿನ ಇರ್ಷಲ್‌ವಾಡಿ ಎಂಬ ಹಳ್ಳಿಯಲ್ಲಿ ಭೂಕುಸಿತ ಸಂಭವಿಸಿದೆ.
ಭೂಕುಸಿತದಿಂದ 17ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ನಸುಕಿನ ಹೊತ್ತು ಜನ ನಿದ್ದೆಯಲ್ಲಿರುವ ಹೊತ್ತು ಭೂಕುಸಿತ ಸಂಭವಿಸಿದ್ದು, ಒಳಗೆ ಎಷ್ಟು ಜನ ಇದ್ದಾರೆ ಎಂಬ ಲೆಕ್ಕ ಇನ್ನೂ ಸಿಕ್ಕಿಲ್ಲ. ಮುಖ್ಯಮಂತ್ರಿ ಏಕನಾಥ ಶಿಂಧೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.





























































































































error: Content is protected !!
Scroll to Top