ಅಪಘಾತ ನೋಡಲು ನಿಂತವರಿಗೆ ಗುದ್ದಿದ ಕಾರು : 9 ಸಾವು

ಜಾಗ್ವಾರ್‌ ಕಾರಿನ ಚಾಲಕನ ನಿರ್ಲಕ್ಷ್ಯಕ್ಕೆ 9 ಮಂದಿ ಬಲಿ

ಅಹಮದಾಬಾದ್ : ಅಹಮದಾಬಾದ್​​​​​​ನ ಸರ್ಖೇಜ್-ಗಾಂಧಿನಗರ ಹೆದ್ದಾರಿಯಲ್ಲಿ ಇಸ್ಕಾನ್ ಸೇತುವೆ ಮೇಲೆ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದಾರೆ.
ತಡರಾತ್ರಿ 1.30 ಗಂಟೆಗೆ ಟ್ರಕ್​ ಹಾಗೂ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತವನ್ನು ನೋಡಲು ಸೇರಿದ್ದ ಜನರಿಗೆ ಮೇಲೆ ಇನ್ನೊಂದು ಕಾರು ವೇಗವಾಗಿ ಬಂದು ಗುದ್ದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೊಲೀಸರು, ವಿದ್ಯಾರ್ಥಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲೇ 6 ಜನ ಮೃತಪಟ್ಟಿದ್ದರೆ, ಪೊಲೀಸರು ಸೇರಿ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
13 ಜನರಿಗೆ ಗಾಯಗೊಂಡಿದ್ದಾರೆ. ಆರೋಪಿ ಕಾರು ಚಾಲಕನಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತದ ವೇಳೆ ಮೃತಪಟ್ಟವರಲ್ಲಿ ಹೆಚ್ಚಿನವರು ಕಾಲೇಜ್​ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಎಸ್‌ಯುವಿ ಕಾರು ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಇದನ್ನು ನೋಡಲು ನಿಂತಿದ್ದ ಜನರ ಮೇಲೆ ವೇಗವಾಗಿ ಬಂದ ಜಾಗ್ವರ್​ ಕಾರು ಹರಿದಿದೆ. ರಾಜ್‌ಪಥ್ ಕ್ಲಬ್ ಪ್ರದೇಶದಿಂದ ವೇಗವಾಗಿ ಬಂದ ಕಾರು, ಜನಸಂದಣಿಯ ಮೇಲೆ ನುಗ್ಗಿದೆ. ಕಾರು ವೇಗವಾಗಿ ಬಂದು ಗುದ್ದಿದ ರಭಸಕ್ಕೆ ಅನೇಕ ಜನರು ಘಟನಾ ಸ್ಥಳದಿಂದ ಸುಮಾರು 20 ರಿಂದ 25 ಅಡಿ ದೂರ ಹಾರಿ ಹೋಗಿ ಬಿದ್ದಿದ್ದಾರೆ.





























































































































error: Content is protected !!
Scroll to Top