ಯತ್ನಾಳ್‌ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ, ಖಾದರ್‌

ಸದನದಲ್ಲಿ ಪ್ರತಿಭಟಿಸುವಾಗ ಅಸ್ವಸ್ಥರಾದ ಯತ್ನಾಳ್‌

ಬೆಂಗಳೂರು : ವಿಧಾನಸಭೆಯಲ್ಲಿ ನಿನ್ನೆ ಸ್ಪೀಕರ್‌ ವಿರುದ್ಧ ಪ್ರತಿಭಟಿಸುವಾಗ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್‌ ಖಾದರ್‌ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಿನ್ನೆ ರಾತ್ರಿಯೇ ಆಸ್ಪತ್ರೆಗೆ ತೆರಳಿದ ಸಿದ್ದರಾಮಯ್ಯ ಮತ್ತು ಖಾದರ್‌ ಶೀಘ್ರ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.
ಸ್ಪೀಕರ್ ಪೀಠಕ್ಕೆ ‌ಅಗೌರವ ತೋರಿಸಿದ ಹಿನ್ನಲೆ ಸ್ವೀಕರ್‌ ಖಾದರ್‌ ಬಿಜೆಪಿಯ 10 ಮಂದಿ ಶಾಸಕರನ್ನು ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಿದ್ದಾರೆ. ಸ್ವೀಕರ್‌ ಆದೇಶದ ಮೇರೆಗೆ ಮಾರ್ಷಲ್‌ಗಳು ಬಿಜೆಪಿ ಶಾಸಕರನ್ನ ಹೊರ ಹಾಕುವ ವೇಳೆ ಬಿಜೆಪಿ ಶಾಸಕರಿಗೂ ಮಾರ್ಷಲ್‌ಗಳಿಗೂ ಜಟಾಪಟಿಯಾಗಿತ್ತು. ಅಸ್ವಸ್ಥರಾಗಿ ಕುಸಿದು ಬಿದ್ದ ಯತ್ನಾಳ್‌ ಅವರನ್ನು ವಿಧಾನಸೌಧದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಆರೋಗ್ಯ ವಿಚಾರಿಸಿ, ಆರೋಗ್ಯದ ಕಡೆ ಗಮನಕೊಡುವಂತೆ ಸಲಹೆ ನೀಡಿದ್ದಾರೆ.





























































































































error: Content is protected !!
Scroll to Top