1 ಕ್ವಿಂಟಾಲ್ ಚಾಕೊಲೆಟ್ ವಶ
ಮಂಗಳೂರು : ಮಕ್ಕಳನ್ನು ಮಾದಕ ವಸ್ತು ವ್ಯಸನಿಗಳನ್ನಾಗಿ ಮಾಡಲು ಚಾಕೊಲೆಟ್‌ನಲ್ಲಿ ಮಾದಕ ವಸ್ತು ಬೆರೆಸಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಂಗಳೂರಿನ ಎರಡು ಅಂಗಡಿಗಳಿಂದ ಸುಮಾರು 100 ಕೆಜೆಯಷ್ಟು ಮಾದಕ ವಸ್ತು ಮಿಶ್ರ ಮಾಡಿದ್ದ ಚಾಕೊಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ರಥಬೀದಿಯಲ್ಲಿ ಮನೋಹರ ಶೇಟ್ ಎಂಬಾತ ಹಾಗೂ ಫಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶದ ಸೋನ್ಕರ್ ಎಂಬಾತ ಇಂಥ ಚಾಕೊಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಈ ಕುರಿತು ಖಚಿತ ಸುಳಿವು ಸಿಕ್ಕಿದ ಬಳಿಕ ಪೊಲೀಸರು ದಾಳಿ ಮಾಡಿ ಬಾಂಗ್ ಎಂಬ ಹೆಸರಿನ 1 ಕ್ವಿಂಟಾಲ್ ಚಾಕೊಲೆಟ್ ವಶಪಡಿಸಿಕೊಂಡಿದ್ದಾರೆ. ಚಾಕೊಲೆಟ್‌ನಲ್ಲಿ ಯಾವ ಮಾದಕ ವಸ್ತು ಬೆರೆಸಲಾಗಿದೆ ಎಂದು ತಿಳಿಯಲು ಅದರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.






























































