ಸೀಮಾ ಹೈದರ್‌ ಬಳಿಯಿತ್ತು 6 ಪಾಸ್‌ಪೋರ್ಟ್‌, 3 ಮೊಬೈಲ್‌ ಫೋನ್‌

ಯಾರೀಕೆ ಪಾಗಲ್‌ ಪ್ರೇಮಿಯಾ? ಪಾಕ್‌ ಗೂಢಚಾರಿಣಿಯಾ?

ಹೊಸದಿಲ್ಲಿ: ಪಾಕಿಸ್ಥಾನಿ ಮಹಿಳೆ ಸೀಮಾ ಹೈದರ್ ಪ್ರೇಮ ಪ್ರಕರಣ ದಿನದಿಂದ ದಿನಕ್ಕೆ ನಿಗೂಢವಾಗುತ್ತಿದೆ. ಈಕೆ ನಿಜವಾಗಿಯೂ ಪಾಗಲ್‌ ಪ್ರೇಮಿಯಾ ಅಥವಾ ಪಾಕಿಸ್ಥಾನದ ಪಕ್ಕಾ ಗೋಢಚಾರಿಣಿಯ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಆಕೆಯನ್ನು ಸತತವಾಗಿ ವಿಚಾರಣೆಗೊಳಪಡಿಸಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಸೀಮಾಳಿಂದ ಎರಡು ವಿಡಿಯೋ ಕ್ಯಾಸೆಟ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು, ಐದು ಪಾಕಿಸ್ಥಾನಿ ಪಾಸ್‌ಪೋರ್ಟ್‌ಗಳು ಮತ್ತು ಒಂದು ಅಪೂರ್ಣ ಪಾಸ್‌ಪೋರ್ಟ್ (ಬಳಕೆಯಾಗದ ಮತ್ತು ಹೆಸರು/ವಿಳಾಸ ಇಲ್ಲದ) ವಶಪಡಿಸಿಕೊಂಡಿದೆ. ಪಾಕಿಸ್ಥಾನದಂಥ ಮಹಿಳೆಯರಿಗೆ ಯಾವ ಸ್ವಾತಂತ್ರ್ಯವೂ ಇಲ್ಲದ ದೇಶದ ಮಹಿಳೆಯೊಬ್ಬಳು ಇಷ್ಟೆಲ್ಲ ಕಾರುಬಾರು ಮಾಡಲು ಸಾಧ್ಯವಾ ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ.
ಆಕೆ ಗಡಿಯಾಚೆಗಿನ ಗೂಢಚಾರಿಕೆಯೇ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ನಮ್ಮ ಬಳಿ ಸಾಕಷ್ಟು ಪುರಾವೆ ಇಲ್ಲದೆ ಆಕೆ ಗೂಢಚಾರಿಕೆಗೆ ಬಂದವಳು ಎಂದು ಹೇಳುವುದು ಸೂಕ್ತವಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳುತ್ತಿದ್ದಾರೆ.
ಸೀಮಾ ಆನ್‌ಲೈನ್ ಗೇಮ್ ಪಬ್​​ಜಿ ಮೂಲಕ 2020ರಲ್ಲಿ ಭಾರತೀಯ ಪ್ರಜೆ ಸಚಿನ್ ಮೀನಾ ಎಂಬವನೊಂದಿಗೆ ಸಂಪರ್ಕಕ್ಕೆ ಬರುತ್ತಾಳೆ. ಸುಮಾರು 15 ದಿನಗಳ ಕಾಲ ಗೇಮ್ ಆಡಿದ ನಂತರ, ಇಬ್ಬರೂ ತಮ್ಮ ನಂಬರ್‌ಗಳನ್ನು ವಿನಿಮಯ ಮಾಡಿಕೊಳ್ಳೂತ್ತಾರೆ. ಹೆಚ್ಚಿನ ಸಂವಹನಕ್ಕಾಗಿ ವಾಟ್ಸಾಪ್‌ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ನಂತರ ಅವರಿಬ್ಬರೂ ಪರಸ್ಪರ ಪ್ರೀತಿಸತೊಡಗಿದರು.
ತನ್ನ ಪ್ರೇಮಿಯೊಂದಿಗೆ ಒಂದಾಗಲು ಸೀಮಾ ತನ್ನ ಮಕ್ಕಳೊಂದಿಗೆ ನೇಪಾಳ ಮತ್ತು ದುಬೈ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸುತ್ತಾಳೆ. ಸೀಮಾಳ ಪತಿ ಧುಲಾಮ್ ಹೈದರ್ 2019ರಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಕಲೆಹಾಕಿರುವ ಮಾಹಿತಿಯ ಪ್ರಕಾರ, ಗುಲಾಮ್ ಪ್ರತಿ ತಿಂಗಳು ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಮತ್ತು ಇತರ ಮನೆಯ ಖರ್ಚುಗಳಿಗೆಂದು ಹಣ ಕಳುಹಿಸುತ್ತಿದ್ದ.
ಜುಲೈ 4 ರಂದು ಸೀಮಾ ಹೈದರ್ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಮತ್ತು ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಮೀನಾನನ್ನು ಕೂಡ ಬಂಧಿಸಲಾಯಿತು. ಜುಲೈ 7ರಂದು ಇಬ್ಬರಿಗೂ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ರಬುಪುರ ಪ್ರದೇಶದ ಮನೆಯೊಂದರಲ್ಲಿ ತನ್ನ ನಾಲ್ಕು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದರು. 2 ತಿಂಗಳಿನಿಂದ ಆಕೆ ತನ್ನ ಗೆಳೆಯ ಸಚಿನ್ ಜೊತೆಗೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಳು.































































































































error: Content is protected !!
Scroll to Top