ಹೆಬ್ರಿ : ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಮುದ್ರಾಡಿಯಲ್ಲಿ ಜೂ. 28 ರಂದು ಸಂಭವಿಸಿದೆ. ಭಾರತಿ ಪೂಜಾರಿ(49) ಎಂಬುವವರೇ ಮೃತಪಟ್ಟ ಮಹಿಳೆ. ಬುಧವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆಯ ನಡುವೆ ಮುದ್ರಾಡಿ ಭಕ್ರೆ ಹೊಳೆಯನ್ನು ದಾಟಿ ಬರುವಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದಿದ್ದು, ಎದ್ದೇಳಲು ಆಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇವರು ಬೀಡಿ ಕಾರ್ಮಿಕೆಯಾಗಿದ್ದು, ಈ ಕುರಿತು ಗಂಡ ರಮೇಶ ನೀಡಿದ ಮಾಹಿತಿಯಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹೊಳೆಗೆ ಬಿದ್ದು ಮಹಿಳೆ ಸಾವು







































