ಬೆಲೆ ಏರಿಕೆಗೆ ಕಾಳಸಂತೆ ಸಬೂಬು

ಕ್ರಮ ಕೈಗೊಳ್ಳುತ್ತೇವೆ ಎಂದ ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾಳಸಂತೆ ಕಾರಣ ಎಂದು ಸರಕಾರ ಸಬೂಬು ಹೇಳಿದೆ. ಬೆಲೆ ಏರಿಕೆ ಗಂಭೀರ ವಿಚಾರ. ಇದನ್ನು ಹಗುರವಾಗಿ ಪರಿಗಣಿಸಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡಬಾರದು. ಕಾಳಧನದಿಂದ ಎಲ್ಲೆಲ್ಲಿ ಬೆಲೆ ಏರಿಕೆಯಾಗಿದೆಯೋ ಅಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಬೆಲೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಯಾರೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ತರಕಾರಿ, ದವಸ ಧಾನ್ಯ ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಸೊಪ್ಪು ತರಕಾರಿಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಧವಸ ಧಾನ್ಯಗಳ ಬೆಲೆ ಸಾಮಾನ್ಯ ಜನರ ಕೈಗೆ ನಿಲುದಂತಾಗಿದೆ.
ಸೊಪ್ಪಿನ ಬೆಲೆ 90 ರಿಂದ 140 ರೂ.ಗೆ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 50 ರೂ. ಏರಿಸಲಾಗಿದೆ, ಜೀರಿಗೆ 300 ರಿಂದ 650 ರೂ.ಗೆ ಏರಿಕೆಯಾಗಿದ್ದು, ಕೆಜಿಗೆ 350 ರೂ. ಏರಿಕೆಯಾಗಿದೆ. ಬೆಳ್ಳುಳ್ಳಿ ಬೆಲೆ ಬಹುತೇಕ ದುಪ್ಪಟ್ಟಾಗಿದೆ. ಪ್ರತಿ ಕೆಜಿಗೆ 50-60 ರೂ.ನಿಂದ 110-120 ರೂ.ಗೆ ಏರಿದೆ. 90 ರೂ. ಇದ್ದ ತೊಗರಿ ಬೇಳೆ ಬೆಲೆ 50 ರುಪಾಯಿ ಏರಿಕೆಯಾಗಿ 140 ರೂ. ಆಗಿದೆ.
ಎಪಿಎಂಸಿಗೆ ಪ್ರಸ್ತುತ ಶೇ. 22-25ರಷ್ಟು ಕೃಷಿ ಉತ್ಪನ್ನಗಳು ಮಾತ್ರ ತಲುಪುತ್ತಿವೆ. ಉಳಿದ ಉತ್ಪನ್ನಗಳು ಮುಕ್ತ ಮಾರುಕಟ್ಟೆಗೆ ಹೋಗುತ್ತಿದ್ದು, ಇದರ ಅಕ್ರಮ ದಾಸ್ತಾನು ಆಗುತ್ತಿದೆ ಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಿದ್ದಾರೆ.



























































































































error: Content is protected !!
Scroll to Top