ಕಾರ್ಕಳ : ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಈ ಬಾರಿ ಏರಿಳಿತ ಕಂಡಿದೆ. ಕಳೆದ ವಾರ 40 ರೂ. ಇದ್ದ ಟೊಮ್ಯೋಟೋ ದರ ಈ ವಾರ 50 ರೂ.ಗೆ ಏರಿದೆ. ಇನ್ನು ಶುಂಠಿ ಮತ್ತು ಬೆಳ್ಳುಳ್ಳಿಯ ಬೆಲೆಯಲ್ಲೂ ತುಸು ಏರಿಕೆ ಕಂಡಿದೆ. ಹಣ್ಣು ಮತ್ತು ಮಾಂಸದ ದರ ಈ ಬಾರಿಯೂ ಕಳೆದ ಬಾರಿಯಷ್ಟೇ ಇದೆ. ಮುಂದಿನ ವಾರ ಬಕ್ರೀದ್ ಹಬ್ಬದ ಹಿನ್ನೆಲೆ ತರಕಾರಿ, ಹಣ್ಣು, ಮಾಂಸಧಾರಣೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 130-150 ರೂ., ಮುಳ್ಳುಸೌತೆ : 30 ರೂ., ಶುಂಠಿ : 160 -220 ರೂ., ಟೊಮ್ಯಾಟೋ : 50 – 60 ರೂ. , ಚೀನಿಕಾಯಿ : 30 ರೂ., ನೀರುಳ್ಳಿ : 20- 25 ರೂ., ಬಟಾಟೆ : 30ರೂ., ಬೆಳ್ಳುಳ್ಳಿ : 140 -160 ರೂ., ಸೌತೆ : 20 – 25 ರೂ., ಬೀನ್ಸ್ : 80 ರೂ., ಬಿಳಿ ಬೀನ್ಸ್ – 70 ರೂ., ಕಾಯಿಮೆಣಸು : 100 -120 ರೂ., ಕ್ಯಾರೆಟ್ :60- 70 ರೂ., ಬೀಟ್ರೋಟ್ : 50 ರೂ., ಕ್ಯಾಬೇಜ್ : 25 -30 ರೂ., ಹೂಕೋಸು : 50 -60 ರೂ., ನವೀಲು ಕೋಸು : 70 ರೂ. ಬೆಂಡೆ : 50 ರೂ., ಕುಂಬಳಕಾಯಿ : 25 ರೂ., ಅಲಸಂಡೆ : 60 – 70 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 70 -80 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 40 ರೂ., ದೊಣ್ಣೆಮೆಣಸು : 80- 90 ರೂ., ಉದ್ದ ಮೆಣಸು : 80 ರೂ., ಬದಣೆ : 50 ರೂ., ಗುಳ್ಳ : 80 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80-100 ರೂ., ಪಾಲಕ್ : 50- 60 ರೂ., ಬಸಳೆ – 60 ರೂ.
ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 180 – 200 ರೂ., ದಾಳಿಂಬೆ : 180- 200 ರೂ., ಮಾವು : 60 -100 ರೂ., (ಮಲ್ಲಿಕಾ : 100 ರೂ. ), (ನೀಲಂ : 60- 80 ರೂ.), ದ್ರಾಕ್ಷಿ : 120 ರೂ., (ಗ್ಲೋಬ್ – 160 ರೂ.) (ಗ್ರೀನ್ ಗ್ರೇಪ್ಸ್ – 120) ಕಲ್ಲಂಗಡಿ : 20 ರೂ., ಬಾಳೆ : 70-80ರೂ., ಕಿತ್ತಳೆ : 100- 120 ರೂ., ಮೂಸಂಬಿ : 90 – 80 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 230-240 ರೂ., ಬಾಯ್ಲರ್ : 200 ರೂ. (ಸ್ಕಿನ್ ಔಟ್ – 230 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.







