ಹೃದ್ರೋಗ ತಜ್ಞರು ಬಹಿರಂಗಪಡಿಸದ ಕಾರಣದಿಂದ ಜಗತ್ತಿಗೇ ಆತಂಕ
ಸಿಡ್ನಿ : ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಸಾವಿಗೆ ಕೋವಿಡ್ ಲಸಿಕೆ ಕಾರಣ ಎಂಬ ಆಘಾತಕಾರಿ ಅಂಶವನ್ನು ಭಾರತ ಮೂಲದ ಹೃದ್ರೋಗ ತಜ್ಞರೊಬ್ಬರು ಬಹಿರಂಗಪಡಿಸಿದ್ದಾರೆ. ಭಾರತೀಯ ಮೂಲದ ಹೃದ್ರೋಗ ತಜ್ಞ ಮತ್ತು ಆಸ್ಟ್ರೇಲಿಯಾದ ವೈದ್ಯ ಹಾಗೂ ಇಂಗ್ಲೆಂಡ್ ಪ್ರಸಿದ್ಧ ಹೃದ್ರೋಗ ತಜ್ಞರೊಬ್ಬರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ನ ದಂತ ಕಥೆ ಶೇನ್ ವಾರ್ನ್ ಕಳೆದ ವರ್ಷ ಮಾರ್ಚ್ 4ರಂದು 52ನೇ ವಯಸ್ಸಿನಲ್ಲಿ ಹೃದಯಘಾತದಿಂದ ನಿಧನರಾಗಿದ್ದರು. ಅವರ ಅಕಾಲಿಕ ಮರಣದಿಂದ ಕ್ರಿಕೆಟ್ ಜಗತ್ತು ಆಘಾತಕ್ಕೊಳಗಾಗಿತ್ತು. ಸಾವಿನ ಕುರಿತು ಹಲವು ಊಹಾಪೋಹಾಗಳು ಹರಿದಾಡಿದ್ದವು. ಶೇನ್ ವಾರ್ನ್ ಸಾಯುವುದಕ್ಕಿಂತ 9 ತಿಂಗಳ ಹಿಂದೆ ಕೋವಿಡ್ mRNA ಮತ್ತು Pfizer mRNA ಎಂಬೆರಡು ಲಸಿಕೆಯನ್ನು ತಗೊಂಡಿದ್ದರು ಎನ್ನಲಾಗಿದೆ.
ಹೃದ್ರೋಗ ತಜ್ಞ ಡಾ. ಅಸೀಮ್ ಮಲ್ಹೋತ್ರಾ ಮತ್ತು ಆಸ್ಟ್ರೇಲಿಯನ್ ಮೆಡಿಕಲ್ ಪ್ರೊಫೆಷನಲ್ಸ್ ಸೊಸೈಟಿ ಅಧ್ಯಕ್ಷರೂ ಆಗಿರುವ ಡಾ. ಕ್ರಿಸ್ ನೀಲ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಫಲಿತಾಂಶದ ಪ್ರಕಾರ ಲಸಿಕೆ ಪರಿಧಮನಿ, ಅಪಧಮನಿಗೆ ಹಾನಿ ಉಂಟು ಮಾಡಿದ ಕಾರಣದಿಂದ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಲಸಿಕೆ ಪಡೆದ ನಂತರ ತಿಂಗಳವರೆಗೆ ಪರಿಧಮನಿಯಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಶೇನ್ ವಾರ್ನ್ ಉತ್ತಮವಾದ ಜೀವನ ಶೈಲಿಯನ್ನು ಹೊಂದಿರಲಿಲ್ಲ. ಕುಡಿತ, ಧೂಮಪಾನ ಹೆಚ್ಚಾಗಿತ್ತು. ಇದು ಲಸಿಕೆಯ ಜತೆಗೆ ಹೃದಯದ ಮೇಲೆ ಮತ್ತಷ್ಟು ಪರಿಣಾಮ ಬೀರಿರುವ ಸಾಧ್ಯತೆ ಇದೆ. ವಾರ್ನ್ ಎರಡೇ ಎರಡು ಡೋಸ್ Pfizer mRNA ಲಸಿಕೆ ಪಡೆದು 9 ತಿಂಗಳು ಆಗುವಷ್ಟರಲ್ಲಿ ಸಾವನ್ನಪ್ಪಿದರು ಎಂದು ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.





































