ಹೆಬ್ರಿ : ತಾಲೂಕಿನ 9 ಗ್ರಾಮ ಪಂಚಾಯತ್‌ಗಳಿಗೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ. ಜೂ. 19 ರಂದು ಹೆಬ್ರಿಯ ಅನಂತ ಪದ್ಮನಾಭ ದೇವಸ್ಥಾನದ ಸಭಾಭವನದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಅವರ ಅಧ್ಯಕ್ಷತೆಯಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ಜರಗಿತು. ಈ ಸಂದರ್ಭ ಎಡಿಸಿ ವೀಣಾ, ಎಸಿ ರಶ್ಮಿ , ಎನ್‌ಐಸಿ ಮಂಜುನಾಥ್ ಹಾಗೂ ತಹಶೀಲ್ದಾರ್ ಪುರಂದರ ಕೆ. ಉಪಸ್ಥಿತರಿದ್ದರು.
ಮೀಸಲಾತಿ ನಿಗದಿ ಈ ಕೆಳಗನಂತಿವೆ,
ಕುಚ್ಚೂರ್ : ಅಧ್ಯಕ್ಷ – ಎಸ್‌ಟಿ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
ನಾಡ್ಪಾಲು : ಅಧ್ಯಕ್ಷ – ಎಸ್‌ಸಿ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ)
ಹೆಬ್ರಿ : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ವರ್ಗ(ಎ) ಮಹಿಳೆ
ಚಾರ : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ
ಶಿವಪುರ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
ಮುದ್ರಾಡಿ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಎಸ್‌ಸಿ ಮಹಿಳೆ
ವರಂಗ : ಅಧ್ಯಕ್ಷ – ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
ಬೆಳ್ವೆ : ಅಧ್ಯಕ್ಷ -ಹಿಂದುಳಿದ ವರ್ಗ ಮಹಿಳೆ, ಉಪಾಧ್ಯಕ್ಷ – ಎಸ್‌ಟಿ ಮಹಿಳೆ
ಮಡಮಕ್ಕಿ : ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
































































