ಕಾರ್ಕಳ : ರಾಷ್ಟ್ರ ಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್‌ನ ಫಲಿತಾಂಶ ಜೂ. 18 ರಂದು ಪ್ರಕಟಗೊಂಡಿದ್ದು, ಕ್ರಿಯೇಟಿವ್ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕಾಲೇಜಿನ ಒಟ್ಟು 12 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಉದ್ಭವ್ ಎಂ. ಆರ್., ಜಾಗೃತಿ ಕೆ.ಪಿ., ಆದಿತ್ಯ ವಿ. ಹೊಳ್ಳ, ಅಭಯ್ ಎಸ್. ಎಸ್., ಕಾರ್ತಿಕ್ ಕೃಷ್ಣಮೂರ್ತಿ ಹೆಗಡೆ, ಸೂರಜ್ ಕುಮಾರ್ ಎನ್., ಪ್ರಣವ್ ಪಿ. ಸಂಜೀ ತೇರ್ಗಡೆಯಾಗಿದ್ದು, PREP -STಯಲ್ಲಿ ಉದ್ಭವ್ ಎಂ. ಆರ್. 3ನೇ ರ‍್ಯಾಂಕ್ ಮತ್ತು ಜಾಗೃತಿ ಕೆ.ಪಿ. 23ನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ ಹಾಗೂ ಜೆಇಇ ಸಂಯೋಜಕರಾದ ನಂದೀಶ್ ಹೆಚ್. ಬಿ. ಹಾಗೂ ತಿರುಮಲ ರೆಡ್ಡಿ ಅಭಿನಂದಿಸಿದ್ದಾರೆ.






























































