ಜೆಇಇ ಅಡ್ವಾನ್ಸ್ ಫಲಿತಾಂಶ : ರಾಷ್ಟ್ರ ಮಟ್ಟದಲ್ಲಿ ಜ್ಞಾನಸುಧಾಕ್ಕೆ ಹತ್ತು ಸಾವಿರದೊಳಗೆ 10 ರ‍್ಯಾಂಕ್

ಸಮೃದ್ಧ್ ನೆಲ್ಲಿಗೆ ಜನರಲ್ ಇಡಬ್ಲುಎಸ್ ಕೆಟಗರಿಯಲ್ಲಿ 715ನೇ ರ‍್ಯಾಂಕ್

ಕಾರ್ಕಳ : ರಾಷ್ಟ್ರ ಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್‌ನ ಫಲಿತಾಂಶ ಜೂ. 18 ರಂದು ಪ್ರಕಟಗೊಂಡಿದ್ದು ಜ್ಞಾನಸುಧಾಕ್ಕೆ 10ಸಾವಿರದೊಳಗಿನ 10 ರ‍್ಯಾಂಕ್‌ಗಳು ಬಂದಿರುತ್ತದೆ. ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ ನಾಯಕ್ 3918ನೇ ರ‍್ಯಾಂಕ್, ಪ್ರಣವ್ ಗುಜ್ಜರ್ 5601ನೇ ರ‍್ಯಾಂಕ್, ಸಮೃದ್ಧ್ ನೆಲ್ಲಿ 5769ನೇ ರ‍್ಯಾಂಕ್ ಹಾಗೂ ಜನರಲ್ ಇಡಬ್ಲುಎಸ್ ಕೆಟಗರಿಯಲ್ಲಿ 715ನೇ ರ‍್ಯಾಂಕ್, ಒ.ಬಿ.ಸಿ-ಎನ್.ಸಿ.ಎಲ್ ಕೆಟಗರಿಯಲ್ಲಿ ಸಾಯಿ ಲಿಖಿತ್ ರೆಡ್ಡಿ 3947ನೇ ರ‍್ಯಾಂಕ್, ಅಮೃತ್ ಗೌಡ ಎಂ. ಪಾಟೀಲ್ 4117ನೇ ರ‍್ಯಾಂಕ್, ಅರ್ಹನ್ ಎ.ಕೆ. 7252ನೇ ರ‍್ಯಾಂಕ್, ಶ್ರೇಯಸ್.ಆರ್.ಗೌಡ 7705ನೇ ರ‍್ಯಾಂಕ್, ಸೂರ್ಯ ವಿ. 7811ನೇ ರ‍್ಯಾಂಕ್, ಎಂ. ಪಿ. ಪ್ರೀತಮ್ 8619ನೇ ರ‍್ಯಾಂಕ್ ಗಳಿಸಿರುತ್ತಾರೆ.

ಈ ಬಾರಿ ದೇಶಾದಾದ್ಯಂತ 1,80,372 ಅಭ್ಯರ್ಥಿಗಳು ಜೆಇಇ 1 ಮತ್ತು 2ರಲ್ಲಿ ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ 36,264 ಮಂದಿ ಬಾಲಕರು ಮತ್ತು 7509 ಬಾಲಕಿಯರು ಸೇರಿ ಒಟ್ಟು 43,773 ಮಂದಿ ಅರ್ಹತೆಯೆನ್ನು ಗಿಟ್ಟಿಸಿಕೊಂಡಿದ್ದಾರೆ. ಈಗಾಗಗಲೇ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ಜ್ಞಾನಸುಧಾದ 93 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಹಾಗೂ ಕೆಸಿಇಟಿಯಲ್ಲಿ 105 ವಿದ್ಯಾರ್ಥಿಗಳು 5000 ಸಾವಿರದೊಳಗಿನ ರ‍್ಯಾಂಕ್‌ನ್ನು ಪಡೆದುಕೊಂಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.





























































































































error: Content is protected !!
Scroll to Top