ಕಾರ್ಕಳ : ಕೆಲವೆಡೆ ಅತಿಯಾದ ಮಳೆ ಮತ್ತು ಇನ್ನು ಕೆಲವೆಡೆ ಮಳೆಯೇ ಇಲ್ಲದ ಕಾರಣ ತರಕಾರಿ ಬೆಲೆಯಲ್ಲಿ ಏರಿಳಿತವಾಗಿದೆ. ಟೊಮ್ಯಾಟೋ ಬೆಲೆ ಹೆಚ್ಚಳವಾಗಿದ್ದು 50 ರೂ. ಆಗಿದೆ. ಸೊಪ್ಪು ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಚೀನಿಕಾಯಿ ಬೆಲೆ 16 ರಿಂದ 20 ರೂ. ಯಿದ್ದು ಪ್ರಸ್ತುತ 30 ರೂ. ಆಗಿದೆ. ಇನ್ನು ಕಾಯಿಮೆಣಸು, ಶುಂಠಿ ಬೆಲೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಕಾರ್ಕಳದ ತರಕಾರಿ ವ್ಯಾಪಾರಸ್ಥರು. ಹಣ್ಣಿನ ದರ ಸಾಧಾರಣ ಯಥಾಸ್ಥಿತಿಯಲ್ಲಿದೆ. ಮಾವು ಬೆಲೆ 50 ರೂ. ಯಿಂದ ಪ್ರಾರಂಭವಾಗುವುದರಿಂದ ಅಧಿಕ ಬೇಡಿಕೆಯಿದ್ದು ಕಾರ್ಕಳದ ಕೆಲವೆಡೆ ರಸ್ತೆ ಬದಿಯಲ್ಲೂ ಮಾವು ಮಾರಾಟ ಮಾಡುತ್ತಿದ್ದಾರೆ. ಇನ್ನು ಮಳೆಯಿಂದಾಗಿ ದ್ರಾಕ್ಷಿ ಇಳುವರಿ ಕುಂಠಿತವಾಗಿದ್ದು, ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಮಾಂಸದ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೊಟ್ಟೆಗೆ 1.5 ರೂ ಏರಿಕೆಯಾಗಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಬಂರಿ ಸೊಪ್ಪು: 180-200 ರೂ., ಮುಳ್ಳುಸೌತೆ : 40 ರೂ., ಶುಂಠಿ : 160 -200 ರೂ., ಟೊಮ್ಯಾಟೋ : 50 ರೂ. , ಚೀನಿಕಾಯಿ : 30 ರೂ., ನೀರುಳ್ಳಿ : 25 ರೂ., ಬಟಾಟೆ : 30ರೂ., ಬೆಳ್ಳುಳ್ಳಿ : 140 -160 ರೂ., ಸೌತೆ : 20 – 25 ರೂ., ಬೀನ್ಸ್ : 120 ರೂ., ಬಿಳಿ ಬೀನ್ಸ್ – 100 ರೂ., ಕಾಯಿಮೆಣಸು : 100 ರೂ., ಕ್ಯಾರೆಟ್ : 80 ರೂ., ಬೀಟ್ರೋಟ್ : 50 ರೂ., ಕ್ಯಾಬೇಜ್ : 25 -30 ರೂ., ಹೂಕೋಸು : 50 -60 ರೂ., ನವೀಲು ಕೋಸು : 80 ರೂ. ಬೆಂಡೆ : 50 ರೂ., ಕುಂಬಳಕಾಯಿ : 30 ರೂ., ಅಲಸಂಡೆ : 80 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 80- 90 ರೂ., ಉದ್ದ ಮೆಣಸು : 80 ರೂ., ಬದಣೆ : 50 ರೂ., ಗುಳ್ಳ : 70 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80-100 ರೂ., ಪಾಲಕ್ : 50- 60 ರೂ.
ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 180 – 200 ರೂ., ದಾಳಿಂಬೆ : 160- 180 ರೂ., (ಸಣ್ಣದು – 100), ಮಾವು : 60 -120 ರೂ., (ಮಲ್ಲಿಕಾ : 80 -120 ರೂ. ), (ನೀಲಂ : 60- 80 ರೂ.), ದ್ರಾಕ್ಷಿ : 120 ರೂ., ಕಲ್ಲಂಗಡಿ : 20 ರೂ., ಬಾಳೆ : 60 -80ರೂ., ಕಿತ್ತಳೆ : 120 ರೂ., ಮೂಸಂಬಿ : 80 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 230-240 ರೂ., ಬಾಯ್ಲರ್ : 210 -220 ರೂ.
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ.


































