ಅಕ್ರಮ ದರ್ಗಾ ತೆರವು ನೋಟಿಸ್‌ ನೀಡಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ

ಓರ್ವ ಸಾವು, ಹಲವು ಪೊಲೀಸರಿಗೆ ಗಾಯ, 170 ಮಂದಿ ಬಂಧನ

ಅಹ್ಮದಾಬಾದ್‌ :‌ ಅಕ್ರಮವಾಗಿ ನಿರ್ಮಿಸಿದದ ದರ್ಗಾ ಒಂದನ್ನು ಕೆಡಹು ನೊಟೀಸ್‌ ನೀಡಲು ಹೋದ ಪೊಲೀಸರ ಮೇಲೆ ಕಲ್ಲುತೂರಿ, ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ಎಸಗಿದ ಘಟನೆ ಗುಜರಾತ್‌ನ ಜುನಾಗಢದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ದರ್ಗಾ ಕಟ್ಟಡವನ್ನು ತೆರವುಗೊಳಿಸಲು ನೋಟಿಸ್‌ ನೀಡಲು ಬಂದ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟು ಪೊಲೀಸರ ಸಹಿತ ಹಲವು ಮಂದಿ ಗಾಯಗೊಂಡಿದ್ದಾರೆ.
ಜುನಾಗಢ್ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು ಅಕ್ರಮವಾಗಿ ಕಟ್ಟಿದ ದರ್ಗಾ ತೆರವುಗೊಳಿಸಲು ಗಡುವು ನೀಡುವ ನೋಟಿಸನ್ನು ಅಂಟಿಸಲು ಹೋಗಿದ್ದರು. ಈ ವೇಳೆ ಪೊಲೀಸರು ಜತೆದ್ದರು. ವಿಚಾರ ತಿಳಿದು ಸುಮಾರು 600 ಜನರು ದರ್ಗಾದಲ್ಲಿ ಜಮಾಯಿಸಿದ್ದರು. ದರ್ಗಾ ತೆರವಿಗೆ ವಿರೋಧ ವ್ಯಕ್ತಪಡಿಸಿ ಜನ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಪೊಲೀಸ್‌ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟದಿಂದ ಡಿಎಸ್‌ಪಿ ಸೇರಿದಂತೆ ಹಲವು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 174 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ದರ್ಗಾ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ. ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಿದ್ದರೆ ಅದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ನೀಡಲು 5 ದಿನಗಳ ಗಡುವನ್ನು ಸ್ಥಳೀಯ ಆಡಳಿತ ನೀಡಿದೆ.







































































error: Content is protected !!
Scroll to Top