ಲಾರಿ ಡಿಕ್ಕಿ : ಬೈಕ್‌ ಸವಾರನಿಗೆ ಗಾಯ

ಅಜೆಕಾರು : ಶಿರ್ಲಾಲು ಗ್ರಾಮದ ನಿಡ್ಡೆಪಾಡಿ ಗರಡಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಜೂ.6 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೈಕಿಗೆ ಲಾರಿ ಡಿಕ್ಕಿ ಹೊಡೆದು ಬೈಕ್‌ ಸವಾರ ಅಂಡಾರು ಗ್ರಾಮದ ಕಳೇರಿಮನೆಯ ರಮೇಶ್‌ ರಾವ್‌ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಲಾರಿ ಪಕ್ಕದ ವಿದ್ಯುತ್‌ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ಕಂಬ ಮುರಿದು ಬಿದ್ದಿದೆ. ಲಾರಿಯ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಮೇಶ್ ರಾವ್ ಬೈಕ್ ಸಮೇತ ರಸ್ತೆಗೆ ಬಿದ್ದು ಬಲಕಾಲು ಮತ್ತು ಬಲಕೈಯ 3 ಬೆರಳುಗಳು ಜಖಂಗೊಂಡಿದೆ. ರಮೇಶ ರಾವ್ ಅವರ ಪುತ್ರಿ ಸುರೇಖಾ ಬಿ. ನೀಡಿದ ದೂರಿನಂತೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







































































error: Content is protected !!
Scroll to Top