ಜೂ. 18 ರಂದು ನಲ್ಲೂರು ಬಸದಿಯಲ್ಲಿ ಜಿನಪೂಜಾ ಕಾರ್ಯಕ್ರಮ

ಜೈನ ಸಮಾಜದ ವತಿಯಿಂದ ವಿ. ಸುನಿಲ್‌ ಕುಮಾರ್‌ ಅವರಿಗೆ ಅಭಿನಂದನಾ ಕಾರ್ಯಕ್ರಮ

ಕಾರ್ಕಳ : ಜೈನ ಸಮಾಜದ ವತಿಯಿಂದ ಅತಿಶಯ ಕ್ಷೇತ್ರ ನಲ್ಲೂರು ಬಸದಿಯಲ್ಲಿ ಜೂ. 18 ರಂದು ಜಿನಪೂಜಾ ಕಾರ್ಯಕ್ರಮ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ 4ನೇ ಬಾರಿಗೆ ಆಯ್ಕೆಯಾಗಿರುವ ವಿ. ಸುನಿಲ್‌ ಕುಮಾರ್‌ ಅವರಿಗೆ ಅಭಿನಂದನಾ ಕಾರ್ಯಕ್ರಮ ಜರುಗಲಿದೆ.
ಬೆಳಗ್ಗೆ 9 ಗಂಟೆಗೆ ಬಸದಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದ್ದು, ಬಳಿಕ 11 ಗಂಟೆಗೆ ಶ್ರೀ ಕೂಷ್ಮಾಂಡಿನಿ ಭವನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ್‌ ಕುಮಾರ್‌ ಉದ್ಘಾಟಿಸಲಿದ್ದು, ಬಸದಿಯ ಆಡಳಿತ ಮೊಕ್ತೇಸರ ವಜ್ರನಾಥ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೂಷ್ಮಾಂಡಿನಿ ಪ್ರಸಾದ್‌ನ ಶಾಂತಿರಾಜ್‌ ಜೈನ್‌, ಪವರ್‌ ಪಾಯಿಂಟ್‌ನ ಮಹಾವೀರ ಹೆಗ್ಡೆ ಮತ್ತು ಕರ್ನಾಟಕ ಜೈನ್‌ ಸ್ವಯಂಸೇವಾ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ನೇಮಿರಾಜ ಅರಿಗ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



















































































error: Content is protected !!
Scroll to Top