ವಿ.ಬಿ.ಎಸ್.‌ ಸಭಾ ವತಿಯಿಂದ ವಿದ್ಯಾರ್ಥಿ ವೇತನ ಮತ್ತು ದತ್ತಿನಿಧಿಗೆ ಅರ್ಜಿ ಆಹ್ವಾನ

ಕಾರ್ಕಳ : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ‌ ಸಭಾ ವತಿಯಿಂದ ಪದವಿ ಪೂರ್ವ ತರಗತಿಗಳಲ್ಲಿ ಕಲಿಯುತ್ತಿರುವ ಕಾರ್ಕಳ ತಾಲೂಕಿನ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿಯಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದು, ಶೇ. 60 ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ದತ್ತಿನಿಧಿ
ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕ ಪಡೆದಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು ನಗದು ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಹಸ್ತಾಕ್ಷರದಲ್ಲಿದ್ದು, ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜು, ತರಗತಿ, ಮನೆಯ ವಿಳಾಸ, ದೃಡೀಕೃತ ಅಂಕಪಟ್ಟಿ, ಕಾಲೇಜು ಪ್ರಾಂಶುಪಾಲರ ದೃಢೀಕರಣ ಹಾಗೂ ಕೂಡುವಳಿಕೆಯ ಮೊಕ್ತೇಸರ ಅಥವಾ ಸಮಾಜದ ಸಂಘ ಸಂಸ್ಥೆಯ ಅಧ್ಯಕ್ಷರ ದೃಢೀಕರಣವನ್ನು ಹೊಂದಿರಬೇಕು.
ಅರ್ಜಿಯನ್ನು ವಿ.ಬಿ.ಎಸ್ ಸಭಾ ಪೆರ್ವಾಜೆ ಅಥವಾ ರಮೇಶ್‌ ಆಚಾರ್ಯ (9844995533) ಮನು ಜ್ಯುವೆಲ್ಲರ್ಸ್‌ ಸಪ್ತಗಿರಿ ಸಂಕೀರ್ಣ ಮಾರ್ಕೆಟ್‌ ರೋಡ್‌ ಕಾರ್ಕಳ ಇವರಿಂದ ಪಡೆಯಬಹುದಾಗಿದೆ. ಅರ್ಜಿ ಫಾರಂಗಳನ್ನು ಜೂ. 21 ರೊಳಗೆ ಪಡೆದು ಜೂ. 26 ರೊಳಗೆ ಸಲ್ಲಿಸಬೇಕು ಎಂದು ವಿ.ಬಿ.ಎಸ್. ಸಭಾದ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



















































































error: Content is protected !!
Scroll to Top