ಬೈಲೂರಿನಲ್ಲಿ ಮತ್ತೆ ರಸ್ತೆ ಅಪಘಾತ – ಕಾರು ಪಲ್ಟಿ

ಅದೃಷ್ಟವಶಾತ್‌ ಪ್ರಯಾಣಿಕರು ಪಾರು

ಕಾರ್ಕಳ : ಬೈಲೂರು ಕೆಳಪೇಟೆಯಲ್ಲಿ ಎರಡು ದಿನಗಳ ಹಿಂದೆ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಮೃತ ಘಟನೆ ಸಂಭವಿಸಿದ ಬೆನ್ನಲ್ಲೇ ಇಂದು (ಜೂ. 10) ಅದೇ ಸ್ಥಳದಲ್ಲಿ ಕಾರು ಪಲ್ಟಿಯಾಗಿ ಮತ್ತೊಂದು ಅಪಘಾತ ಸಂಭವಿಸಿದೆ.
ಕಣಂಜಾರಿನಿಂದ ಕಾರ್ಕಳದೆಡೆಗೆ ಸಾಗುತ್ತಿದ್ದ ಕಾರು ಬೈಲೂರು ಕೆಳಪೇಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿ ಮೂರು ಮಂದಿಯಿದ್ದು ಅದೃಷ್ಟವಶಾತ್‌ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಟಯರ್‌ ಸವೆದಿದ್ದು ಚಾಲಕನ ನಿಯಂತ್ರಣ ತಪ್ಪಿ ಮಣ್ಣ ರಸ್ತೆಗೆ ಸಾಗಿದ ಪರಿಣಾಮವಾಗಿ ಟಯರ್‌ ಬ್ಲಾಸ್ಟ್‌ ಆಗಿ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.







































































error: Content is protected !!
Scroll to Top