ಕಾರ್ಕಳ: ಕುಕ್ಕುಂದೂರು ಗ್ರಾಮದ ಪೊಸನೊಟ್ಟುವಿನಲ್ಲಿ ಎನ್. ಅಶೋಕ್ ಎಂಬವರ ಮಾಲೀಕತ್ವದ ಶ್ರೀದೇವಿ ಶಿಲ್ಪಕಲಾ ಕೇಂದ್ರದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಅಸ್ಸಾಂ ಮೂಲದ ಅಮಿತ್ ಮಿಂಜು (20) ಎಂಬ ಯುವಕ ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾವ ನೊವೆಲ್ ಟೊಪೊ (26) ಮತ್ತು ಅಕ್ಕ ಸುಶ್ಮಿತಾ ಮಿಂಜಳಾ ಅವರೊಂದಿಗೆ ಅಮಿತ್ ಮಿಂಜು ವಾಸವಾಗಿದ್ದರು. ಶನಿವಾರ ರಾತ್ರಿ ಮಲಗಿದವರು ಮರುದಿನ ಬೆಳಗ್ಗೆ ಎದ್ದಿರಲಿಲ್ಲ, ಎಬ್ಬಿಸಲು ಹೋದಾಗ ಮಲಗಿದ್ದಲ್ಲೇ ಮೃತಪಟ್ಟ ಸ್ಥಿತಿಯಲ್ಲಿದ್ದರು.
ಯುವಕ ಮಲಗಿದ್ದಲ್ಲೇ ಸಾವು





































