ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಆರು ಅಂಕ

ಅನಘ ರಾಜ್ಯಕ್ಕೆ ಮೂರನೇ ಸ್ಥಾನ

ಕಾರ್ಕಳ : 2022 -23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏ. 21ರಂದು ಪ್ರಕಟಗೊಂಡಿತ್ತು. ಕ್ರಿಯೇಟಿವ್‌ ಪಿಯು ಕಾಲೇಜಿನ ಅನಘ ಮತ್ತು ಅಕ್ಷತ ಆರ್.‌ ಪೈ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಹೆಚ್ಚುವರಿಯಾಗಿ ತಲಾ 6 ಅಂಕಗಳನ್ನು ಪಡೆದಿದ್ದಾರೆ.

ಅನಘ ಈ ಹಿಂದೆ ಫಲಿತಾಂಶ ಪ್ರಕಟವಾದಾಗ 589 ಅಂಕಗಳಿಸಿದ್ದು, ರಾಜ್ಯಕ್ಕೆ 9 ನೇ ಸ್ಥಾನ ಪಡೆದಿದ್ದರು. ಮರು ಮೌಲ್ಯಮಾಪನದಲ್ಲಿ ಇಂಗ್ಲೀಷ್‌ನಲ್ಲಿ 04 ಅಂಕ ಹೆಚ್ಚುವರಿ ಮತ್ತು ಅರ್ಥಶಾಸ್ತ್ರದಲ್ಲಿ 02 ಹೆಚ್ಚುವರಿ ಅಂಕದೊಂದಿಗೆ ಪೂರ್ಣಾಂಕ ಪಡೆದು 595 ಅಂಕದೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಕಾರ್ಕಳದ ಆಯುರ್ವೇದ ವೈದ್ಯ ಡಾ. ಗುರುಚರಣ್‌ ಮತ್ತು ಅರ್ಚನಾ ದಂಪತಿ ಪುತ್ರಿ.

ಅಕ್ಷತಾ ಆರ್‌. ಪೈ ಈ ಹಿಂದೆ 582 ಅಂಕಗಳಿಸಿದ್ದು, ಮರು ಮೌಲ್ಯಮಾಪನದಲ್ಲಿ ಅರ್ಥಶಾಸ್ತ್ರದಲ್ಲಿ ಆರು ಹೆಚ್ಚುವರಿ ಅಂಕದೊಂದಿಗೆ ಪೂರ್ಣಾಂಕ ಪಡೆದು ರಾಜ್ಯಕ್ಕೆ 10ನೇ ಸ್ಥಾನಿಯಾಗಿದ್ದಾರೆ.

ಮರು ಮೌಲ್ಯಮಾಪನದ ಬಳಿಕ ಸಂಸ್ಥೆಯು ರಾಜ್ಯದಲ್ಲಿ ಹತ್ತು ರ‍್ಯಾಂಕ್‌ಗಳ ಒಳಗೆ ಒಟ್ಟು 08 ರ‍್ಯಾಂಕ್‌ ಗಳನ್ನು ತನ್ನದಾಗಿಸಿಕೊಂಡಿದೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಶುಪಾಲ, ಆಡಳಿಯ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಪೋಷಕರು ಅಭಿನಂದಿಸಿದ್ದಾರೆ.





































error: Content is protected !!
Scroll to Top